ಮಹಾಭಾರತದ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ನಿಧನ
ಬಿ ಆರ್ ಚೋಪ್ರಾ ನಿರ್ಮಾಣದ ಮಹಾಭಾರತ ಧಾರವಾಹಿಯಲ್ಲಿ ಭೀಮನ ಪಾತ್ರವನ್ನ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಸೋಬ್ತೀ ಅವರು 74 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಬೆನ್ನೂ ಮೂಳೆ ಸಮಸ್ಯೆ ಯಿಂದ ಬಳಲುತ್ತಿದ್ದರು . ಆದರೆ ಸಾವಿಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲ.
ಕಟ್ಟು ಮಸ್ತಾದ ಮೈಕಟ್ಟಿಗ ಹೆಸರುವಾಸಿಯಾಗಿರುವ ಪ್ರವೀಣ್ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪಂಜಾಬ್ ಮೂಲದವರಾದ ಇವರು 6.6 ಅಡಿ ಎತ್ತರವಿದ್ದಾರೆ. ನಟನಾ ವೃತ್ತಿಗೂ ಮೊದಲು ಪ್ರವೀಣ್ ಹ್ಯಾಮರ್ ಥ್ರೋ ಮತ್ತು ಡಿಸ್ಕಸ್ ಥ್ರೋ ಅಥ್ಲೆಟ್ ಗಳಲ್ಲಿ ಭಾಗವಹಿಸುತ್ತಿದ್ದರು. ಏಷ್ಯನ್ಸ್ ಗೇಮ್ಸ್ ನಲ್ಲಿ 4 ಬಾರಿ ಪದಕ ವಿಜೇತರಾಗಿದ್ದರು. 2 ಚಿನ್ನ 1 ಬೆಳ್ಳಿ 1 ಕಂಚು ಪದಕಕ್ಕೆ ಕೊರಳೊಡ್ಡಿದ್ದಾರೆ. 1968 ರ ಮೆಕ್ಸಿಕೋ 1972 ಮ್ಯೂನಿಚ್ ಗೇಮ್ ಗಳಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ ಭಾರತ ಸರ್ಕಾರ ಇವರನ್ನ ಗುರುತಿಸಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
1970 ದಶಕದ ಅಂತ್ಯದಲ್ಲಿ ಬಾಲಿವುಡ್ ನ ಮೊದಲ ಚಿತ್ರಕ್ಕೆ ಸಹಿ ಹಾಕಿದರು. ಅಮಿತಾಬ್ ಬಚ್ಚನ್ ಜೊತೆ ಶಾಹೆನ್ ಶಾ ಚಿತ್ರದಲ್ಲಿ ಮುಖ್ತಾರ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. Actor PraveenKumarSobti, who played the role of Bheem in BR Chopra’s television series Mahabharat
ಕರಿಷ್ಮಾ ಕುದ್ರತ್ ಕಾ, ಯುಧ್, ಜಬರ್ದಸ್ತ್, ಸಿಂಘಸನ್, ಖುದ್ಗರ್ಜ್, ಲೋಹಾ, ಮೊಹಬ್ಬತ್ ಕೆ ದುಷ್ಮನ್, ಇಲಾಕಾ ಇದಷ್ಟೇ ಅಲ್ಲದೇ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಬಿ ಆರ್ ಚೋಪ್ರಾ ನಿರ್ದೇಶನದ ಪೌರಾಣಿಕ ಮಹಾಭಾರತ ಧಾರವಾಹಿಯಲ್ಲಿ ನಟಿಸಲು ಸಹಿ ಹಾಕಿದರು. ಆ ಪಾತ್ರ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನ ತಂದು ಕೊಟ್ಟಿತು. 2013 ರಲ್ಲಿ ಪ್ರವೀಣ್ ರಾಜಕೀಯ ರಂಗಕ್ಕಿಳಿದರು. ದೆಹಲಿಯ ವಜೀರ್ ಪುರ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಪರವಾಗಿ ಸ್ಪರ್ದಿಸಿ ಸೋತರು. 2021 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರವೀಣ್ 1981 ರ ರಕ್ಷಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆದರೆ ಮಹಾಭಾರತದ ಭೀಮನಿಂದ ಮನ್ನಣೆ ಪಡೆದರು. 1998 ರಲ್ಲಿ ಅಭಿನಯಿಸಿದ ಕೊನೆಯ ಚಿತ್ರ ‘ಟ್ರೇನ್ ಟು ಪಾಕಿಸ್ತಾನ್’