Akhanda | `ಅಖಂಡ’ ನಿರ್ದೇಶಕನಿಗೆ ಭಾರಿ ಡಿಮ್ಯಾಂಡ್ akhanda director boyapati srinu remuneration
ನಿರ್ದೇಶಕ ಬೋಯಪಾಟಿ ಶ್ರೀನು ತೆಲುಗು ಇಂಡಸ್ಟ್ರಿಗೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ನಟಸಿಂಹ, ನಂದಮೂರಿ ಬಾಲಕೃಷ್ಣ ಜೊತೆ ‘ಅಖಂಡ’ ಚಿತ್ರದ ಮೂಲಕ ಮತ್ತೊಂದು ಸೂಪರ್ ಡೂಪರ್ ಬ್ಲಾಕ್ ಬಸ್ಟರ್ ಹಿಟ್ ಪಡೆದಿದ್ದಾರೆ.
ಅಖಂಡ ಸಿನಿಮಾ 50 ದಿನಗಳಲ್ಲಿ 200 ಕೋಟಿ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ದಾಖಲೆ ಬರೆದಿದೆ.
ಒಟಿಟಿಯಲ್ಲೂ ಸಂಚಲನ ಮೂಡಿಸಿದ್ದ ‘ಅಖಂಡ’ ಸಿನಿಮಾದಿಂದ ಬೋಯಪತಿ ರೇಂಜ್ ಮತ್ತೊಂದು ಹಂತಕ್ಕೆ ತಲುಪಿದೆ.
ಹೀಗಾಗಿ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆಗೆ ಡಿಮ್ಯಾಂಡ್ ಮಾಡ್ತಿದ್ದಾರೆ.
ಅಖಂಡ ಸಿನಿಮಾದ ಸೀಕ್ವೆಲ್ ಗೆ ಬೋಯಪಾಟಿ ಸಜ್ಜಾಗಿದ್ದಾರೆ. ಆದ್ರೆ ನಟ ಬಾಲಕೃಷ್ಣ ಬ್ಯೂಸಿಯಾಗಿದ್ದಾರೆ.
ಹೀಗಾಗಿ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಜೊತೆ ಸಿನಿಮಾ ಮಾಡಲು ಬೋಯಪಾಟಿ ಶ್ರೀನು ರೆಡಿಯಾಗಿದ್ದಾರೆ.
ಇಲ್ಲಿ ಟ್ವಿಸ್ಟ್ ಏನೆಂದರೆ ಹೀರೋ ರಾಮ್ ಗಿಂತ ನಿರ್ದೇಶಕ ಬೋಯಪಾಟಿ ಶ್ರೀನು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ.
ರಾಮ್ 9 ಕೋಟಿ ರೂಪಾಯಿ ಕೇಳಿದ್ರೆ ಅಖಂಡ ನಿರ್ದೇಶಕ ಬೋಯಪಾಟಿ 12 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.