ಮೆಜೆಸ್ಟಿಕ್ ಚಿತ್ರಕ್ಕೆ 20 ವರ್ಷ – ಅಭಿಮಾನಿಗಳಿಗೆ ಡಿ ಬಾಸ್ ಧನ್ಯವಾದ
20 ವರ್ಷಗಳ ಹಿಂದಿನ ಕಥೆಯದು, ಕನ್ನಡ ಚಿತ್ರರಂಗದ ಬೇಡಿಕೆಯ ನಟ ತೂಗೂದೀಪ್ ಶ್ರೀನಿವಾಸ್ ಪುತ್ರ ಮೊದಲ ಭಾರಿಗೆ ನಾಯಕನಾಗಿ ಸ್ಯಾಂಡಲ್ ವುಡ್ ಅದೃಷ್ಟ ಪರೀಕ್ಷೆಗಿಳಿದಿದ್ದ, ಅಲ್ಲಿಯವರಗೂ ಆತ ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ . 2002 ಫೆಬ್ರವರಿ 8 ರಂದು ತೆರಕಂಡ ಚಿತ್ರ ಮೆಜಸ್ಟಿಕ್ ದರ್ಶನ್ ಸಿನಿಮಾ ಕೆರಿಯರ್ ಅನ್ನೇ ಬದಲಿಸಿತು ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಇಮೇಜ್ ನಾಯಕನನ್ನ ಹುಟ್ಟುಹಾಕಿತ್ತು. ಇಂದು ದರ್ಶನ್ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್. ಬಹು ಬೇಡಿಕೆಯ, ಅಗಾಧ ಫ್ಯಾನ್ ಫಾಲೋಯಿಂಗ್ ಹೊಂದಿರುವ ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಆಗಿ ಬೆಳೆದಿದ್ದಾರೆ.
ಮೆಜೆಸ್ಟಿಕ್ ಸಿನಿಮಾವನ್ನ ಪಿ ಎನ್ ಸತ್ಯ ನಿರ್ದೇಶಿಸಿದ್ದರು. ಎಂ ಜಿ ರಾಮಮೂರ್ತಿ ಈ ಸಿನಿಮಾ ನಿರ್ಮಾಣ ಮಾಡಿದ್ದರು. ದರ್ಶನ್ ಗೆ ಜೋಡಿಯಾಗಿ ಸ್ಪರ್ಶ ರೇಖಾ ಕಾಣಿಸಿಕೊಂಡಿದ್ದರು. ಈ ಮೂವರನ್ನು ದರ್ಶನ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ದರ್ಶನ್ ಮತ್ತು ರೇಖಾ ಜೋಡಿಯನ್ನ ಪ್ರೇಕ್ಷಕ ಪ್ರಭುಗಳು ಮೆಚ್ಚಿಕೊಂಡಿದ್ದರು.
ಮೆಜೆಸ್ಟಿಕ್ ಗೆ 20 ವರ್ಷ ತುಂಬಿದ ಸಮಯದಲ್ಲಿ ದರ್ಶನ್ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿ ಇಟ್ಟ ಮೊದಲ ಹೆಜ್ಜೆ ‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತ ಒಳ್ಳೆ ಬುನಾದಿಯನ್ನು ನೀಡಿದ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ ಎಂದು ಟ್ವಿಟ ಮಾಡಿದ್ದಾರೆ.
ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದರ್ಶನ್ ಹಲವು ಸಿನಿಮಾಗಳನ್ನ ಮಾಡಿದ್ದು ಕೆಲವು ಗದ್ದಿವೆ ಕೆಲವೂ ಸೋತಿವೆ ಆದರೆ ಇದರ ಮದ್ಯೆ ಕನ್ನಡ ಚಿತ್ರ ರಂಗದ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ.
ದರ್ಶನ್ ಸದ್ಯ ತಮ್ಮ ಮುಂದಿನ ಸಿನಿಮಾ ಕ್ರಾಂತಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದು, ಶೈಲಜಾ ನಾಗ್ ಬಂಡವಾಳ ಹೂಡಿದ್ದಾರೆ.