ಸೂಪರ್ ಸ್ಟಾರ್ 169 ನೆ ಚಿತ್ರಕ್ಕೆ ಯುವ ನಿರ್ದೇಶಕನಿಗೆ ಅವಕಾಶ….
ಸೂಪರ್ ಸ್ಟಾರ್ ರಜಿನಿಕಾಂತ್ ಗೆ ಚಿತ್ರವನ್ನ ನಿರ್ದೇಶಿಸಬೇಕು ಎನ್ನುವುದು ಹಲವು ನಿರ್ದೇಶಕರ ಕನಸು.. ಅದರಲ್ಲೂ ಯುವ ನಿರ್ದೇಶಕರಿಗೆ ಅದು ಫ್ಯಾನ್ ಬಾಯ್ ಮೂಮೆಂಟ್. ಇಂಥಹ ಅಧ್ಬುತ ಅವಕಾಶ ವಿಜಯ್ ಮುಂಬರುವ ಚಿತ್ರ ಬೀಸ್ಟ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೆ ಸಿಕ್ಕಿದೆ.
ದಕ್ಚಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ತಮ್ಮ 169 ಚಿತ್ರವನ್ನ ನಿರ್ದೇಶಿಸಲು ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೆ ಅವಕಾಶ ನೀಡಿದ್ದಾರೆ. super star rajanikanth give chance to young director nelsan dileep kumar
ಮೂಲಗಳ ಪ್ರಕಾರ ರಜನಿಕಾಂತ್ ಅಣ್ಣಾತೆ ನಂತರ ಮತ್ತೊಮದು ಚಿತ್ರವನ್ನ ಮಾಡಲು ಯೆಸ್ ಅಂದಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಹೇಳಿರುವ ಕಥೆಕೇಳಿ ಕುತೂಹಲಗೊಂಡಿರು ರಜನಿ ತಮ್ಮ 169 ಚಿತ್ರಕ್ಕೆ ಅವಕಾಶ ನೀಡಿದ್ದಾರೆ. ಈ ಸಿನಿಮಾ ಚಿತ್ರೀಕರಣ ಏಪ್ರಿಲ್ ಅಥವಾ ಮೇ ನಲ್ಲಿ ಆರಂಭವಾಗಲಿದೆ. ಅಲ್ಲದೇ ಈ ಸಿನಿಮಾವನ್ನ ಡಿಸೆಂಬರ್ 2022 ರಿಂದ ಫೆಬ್ರವರಿ 2023 ರ ಒಳಗೆ ರಿಲೀಸ್ ಮಾಡುವ ಯೋಜನೆ ಚಿತ್ರತಂಡದ್ದು.
ಈ ಸಿನಿಮಾಗೆ ತಮಿಳನ ಖ್ಯಾತ ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದ್ದಾರೆ. ಅನಿರುದ್ದ ರವಿಚಂದರ್ ಸಂಗೀತ ಮತ್ತು ಹಿನ್ನಲೇ ಸಂಗೀತದ ಹೊಣೆ ಹೊತ್ತಿದ್ದಾರೆ. ಈ ಕುರಿತು ಸಿನಿಮಾದ ಚಿತ್ರತಂಡದಿಂದ ಅಧಿಕೃತ ಹೇಳಿಕೆಗಲು ಬರಬೇಕಿದೆ.
ರಜನಿ ಅಭಿನಯದ ಅಣ್ಣಾತೆ ಚಿತ್ರ ವರ್ಷ ರಿಲೀಸ್ ಆಗಿತ್ತು. ಪ್ಯಾಮಿಲಿ ಆಡಿಯೆನ್ಸ್ ಗಳನ್ನ ರಂಜಿಸಿತ್ತು. ಶಿವ ನಿರ್ದೇಶನದ ಕೌಟುಂಬಿಕ ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕೀರ್ತಿ ಸುರೇಶ್ ತಂಗಿ ಪಾತ್ರದಲ್ಲಿ ನಟಸಿ ಸೈ ಎನಿಸಿಕೊಂಡಿದ್ದರು.
ಇನ್ನೂ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಬೀಸ್ಟ್ ಚಿತ್ರದ ರಿಲೀಸ್ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ವಿಜಯ್ ಅಭಿನಯದ ಈ ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.