ಹಿಜಾಬ್ ವಿವಾದ.. ಕಮಲ್ ಹಾಸನ್ ಹೇಳಿದಿಷ್ಟು.. karnataka hijab controversy actor-kamal-haasan reaction
ನವದೆಹಲಿ : ಕರ್ನಾಟಕದಲ್ಲಿ ಸೃಷ್ಠಿಯಾಗಿರುವ ಹಿಜಾಬ್ ವಿವಾದ ಬೌಂಡರಿಗಳನ್ನು ದಾಟಿ ದೇಶದಾದ್ಯಂತ ಸದ್ದು ಮಾಡುತ್ತಿದೆ.
ಭಾರತದಾದ್ಯಂತ ಹಿಜಾಬ್ ಬೇಕೋ ಬೇಡವೋ ಎಂಬ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ನಟ ಕಮಲ್ ಹಾಸನ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಆತಂಕ ಹೊರಹಾಕಿದ್ದಾರೆ.
ಕಮಲ್ ಟ್ವೀಟ್ ನಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಆತಂಕ ಸೃಷ್ಠಿ ಮಾಡಿದೆ. actor-kamal-haasan reaction karnataka hijab
ಮುಗ್ಧ ವಿದ್ಯಾರ್ಥಿಗಳಲ್ಲಿ ಕೋಮು ವಿಭಜನೆ ಸೃಷ್ಟಿಸುತ್ತಿದೆ. ನೆರೆಯ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ತಮಿಳುನಾಡಿನಲ್ಲಿ ನಡೆಯಬಾರದು.
ರಾಜ್ಯದ ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ತಮಿಳುನಾಡು ಹೆಚ್ಚು ಜಾಗರೂಕರಾಗಿರಬೇಕು ಎಂದು ಕಮಲ್ ಹಾಸನ್ ಮನವಿ ಮಾಡಿಕೊಂಡಿದ್ದಾರೆ.