Chetanahimsa | ಬೊಮ್ಮಾಯಿ ನಿರಾಸಕ್ತಿ ಹೊಂದಿರುವ ಮತ್ತೊಬ್ಬ ‘ಪ್ಲೇಸ್ಹೋಲ್ಡರ್’ ಸಿಎಂ hijab controversy chetan ahimsa reaction saaksha tv
ಹಿಜಾಬ್ ವಿಷಯದಲ್ಲಿ ಬಹುಸಂಖ್ಯಾತ ಗುಂಡಾಗಿರಿ ಆಘಾತಕಾರಿ
ಬೆಂಗಳೂರು : ಬಸವರಾಜ್ ಬೊಮ್ಮಾಯಿ ಅವರು ಅವರೊಬ್ಬ ನಿಷ್ಪರಿಣಾಮಕಾರಿ, ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಹೊಂದಿರುವ ಮತ್ತೊಬ್ಬ ‘ಪ್ಲೇಸ್ಹೋಲ್ಡರ್‘ ಮುಖ್ಯಮಂತ್ರಿ ಎಂದು ಸಾಬೀತು ಮಾಡಿದ್ದಾರೆ ಎಂದು ಹಿಜಾಬ್ ವಿಚಾರವಾಗಿ ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.
ಹಜಾಬ್ ವಿವಾದದ ಕುರಿತು ಫೇಸ್ ಬುಕ್ ನಲ್ಲಿ ಚೇತನ್, ಉಡುಪಿಯಲ್ಲಿ ಹಿಜಾಬ್ ಕುರಿತು ಸಮಸ್ಯೆ ಶುರುವಾದದ್ದು ಜನವರಿ 1, 2022 ರಂದು. ಆದರೆ ಸರ್ಕಾರವು ಆ ಸಮಸ್ಯೆಯನ್ನು ಹಿಜಾಬ್ ಮತ್ತು ಶಾಲುಗಳನ್ನು ನಿಷೇಧಿಸುವ ಮೂಲಕ ಪರಿಹರಿಸುವ ಪ್ರಯತ್ನ ಮಾಡಿದ್ದು ಫೆಬ್ರವರಿ 5 ರಂದು. ಈಗ ಉಲ್ಬಣಗೊಂಡ ನಂತರ, ಸರ್ಕಾರವು ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. 6ಕ್ಕೂ ಹೆಚ್ಚು ತಿಂಗಳುಗಳಲ್ಲಿ, ಬಸವರಾಜ್ ಬೊಮ್ಮಾಯಿ ಅವರು ಅವರೊಬ್ಬ ನಿಷ್ಪರಿಣಾಮಕಾರಿ, ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಹೊಂದಿರುವ ಮತ್ತೊಬ್ಬ ‘ಪ್ಲೇಸ್ಹೋಲ್ಡರ್‘ ಮುಖ್ಯಮಂತ್ರಿ ಎಂದು ಸಾಬೀತು ಮಾಡಿದ್ದಾರೆ ಎಂದು ದೂರಿದ್ದಾರೆ.
ಜೊತೆಗೆ ಕರ್ನಾಟಕ ಬಿಜೆಪಿಯ ಇಸ್ಲಾಂ ದ್ವೇಷ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿರ್ಲಕ್ಷ್ಯವು ಈ ಕೋಮುವಾದವನ್ನು ಉಲ್ಬಣಗೊಳಿಸಿದೆ. ಆದರೆ, ಈ ಹಿಜಾಬ್ ಸಮಸ್ಯೆ ಶುರುವಾದದ್ದು ಉಡುಪಿಯ 6 ವಿದ್ಯಾರ್ಥಿನಿಯರು ಬೇರೆ ಕಾಲೇಜುಗಳಲ್ಲಿ ಹೇಗೆ ಇತರೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಾರೆಯೇ ಹಾಗೆಯೇ ಅವರೂ ಕೂಡ ಧರಿಸಬೇಕೆಂದು ಇಚ್ಚಿಸಿದಾಗ. ಪ್ರಸ್ತುತ ಉದ್ವೇಗಕ್ಕೆ ಕಾರಣವಾಗಿರುವುದು ತಲೆಮಾರುಗಳ ಸಮವಸ್ತ್ರದ ನಿಯಮಗಳ ಆಯ್ದ ಅನುಷ್ಠಾನ ಎಂದು ಬರೆದಿದ್ದಾರೆ.
ಜೊತೆಗೆ ಹಿಜಾಬ್ ವಿಷಯದಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ಗೂಂಡಾಗಿರಿಯು ಆಘಾತಕಾರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸರ್ಕಾರ ನಿರ್ದೇಶಿತ ಸಮವಸ್ತ್ರವನ್ನೇ ಧರಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಹಿಂಸಾಚಾರವಿಲ್ಲದೆ ಮತ್ತು ಶಿಕ್ಷಣವನ್ನು ರಾಜಿ ಮಾಡಿಕೊಳ್ಳದೇ, ಸೂಕ್ಷ್ಮವಾಗಿ ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುವುದು ಮುಖ್ಯ. ಈ ಶೈಕ್ಷಣಿಕ ವರ್ಷದ ಮುಗಿಯುವವರೆಗೂ ಯಾವುದೇ ನೀತಿಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದ್ದಾರೆ.