Meenakshi Chaudhary | ಲಿಪ್ ಲಾಕ್ ಮಾಡೋಕೆ ಅಭ್ಯಂತರವಿಲ್ಲ khiladi-movie-heroine-meenakshi-chaudhary-about-kiss-scenes
ಲಿಪ್ ಲಾಕ್ ಸೀನ್ ಗಳಲ್ಲಿ ನಟಿಸೋಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ. ಇದೆಲ್ಲಾ ಕಮರ್ಷಿಯಲ್ ಸಿನಿಮಾದ ಭಾಗ ಎಂದು ನನಗೆ ಗೊತ್ತಿದೆ ಎಂದು ಟಾಲಿವುಡ್ ನಟಿ ಮೀನಾಕ್ಷಿ ಚೌದರಿ ಹೇಳಿದ್ದಾರೆ.
ಇಚ್ಚಟ ವಾಹನಮುಲು ನಿಲುಪರಾದು ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಮೀನಾಕ್ಷಿ ಚೌದರಿ ಎರಡನೇ ಸಿನಿಮಾದಲ್ಲಿಯೇ ಸ್ಟಾರ್ ನಟನೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಮಾಸ್ ಮಹಾರಾಜ ರವಿತೇಜ ನಟನೆಯ ಕಿಲಾಡಿ ಸಿನಿಮಾದಲ್ಲಿ ಮೀನಾಕ್ಷಿ ಮಿಂಚಿದ್ದಾರೆ. ರಮೇಶ್ ವರ್ಮಾ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 11 ರಂದು ಪ್ರೇಕ್ಷಕರ ಮುಂದೆ ಬರಲಿದೆ. ಈ ಮೋವಿ ಪ್ರಮೋಷನ್ ಭಾಗವಾಗಿ ಮೀನಾಕ್ಷಿ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಿನಿಮಾ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಸಿನಿಮಾದಲ್ಲಿರುವ ಲಿಪ್ ಲಾಕ್ ಸೀನ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಲಿಪ್ ಲಾಕ್ ಸೀನ್ ಗಳಲ್ಲಿ ನಟಿಸೋಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ. ಇದೆಲ್ಲಾ ಕಮರ್ಷಿಯಲ್ ಸಿನಿಮಾದ ಭಾಗ ಎಂದು ನನಗೆ ಗೊತ್ತಿದೆ. ಕಥೆಗೆ ಅಗತ್ಯವಾಗಿರುವುದರಿಂದಲೇ ನಾನು ಕಿಸ್ ಮಾಡಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ.
ಇನ್ನು ಸಿನಿಮಾ ಬಗ್ಗೆ ಮಾತನಾಡಿ ನಾನು ರವಿತೇಜ ಅವರ ಜೊತೆ ನಟಿಸುತ್ತೇನೆ ಅಂತಾ ಅಂದುಕೊಂಡಿರಲಿಲ್ಲ. ಅವರ ಟೈಮಿಂಗ್ ಒಂದು ರೇಂಜಿನಲ್ಲಿರುತ್ತದೆ. ತೆಲುಗು ಅಷ್ಟಾಗಿ ಬರದೇ ಇರುವ ಕಾರಣ ನಾನು ಸ್ವಲ್ಪ ತಡವರಿಸಿದೆ. ಆಗ ರವಿತೇಜಾ ಸರ್ ನನಗೆ ಹೆಲ್ಪ್ ಮಾಡಿದ್ರು. ಹೀಗಾಗಿಯೇ ನಾನು ಪಾತ್ರಕ್ಕೆ ತಕ್ಕಂತೆ ನಟಿಸಿದ್ದೇನೆ ಎಂದಿದ್ದಾರೆ.
ಇನ್ನು ಈ ಸಿನಿಮಾ ದೊಡ್ಡ ಹಿಡ್ ಆಗುತ್ತದೆ ಎಂದು ನಟ ರವಿತೇಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುಷ್ಪಾ, ಶ್ಯಾಮ್ ಸಿಂಗ್ ರಾಯ್ ಸಿನಿಮಾಗಳ ಬಳಿಕ ಟಾಲಿವುಡ್ ನಲ್ಲಿ ರಿಲೀಸ್ ಆಗುತ್ತಿರುವ ಸ್ಟಾರ್ ಸಿನಿಮಾ ಇದಾಗಿದೆ.