samantha ಮಗುವಿಗೆ ಜನ್ಮ ನೀಡ್ತೀನಿ : ಸಮಂತಾ samantha-old-comments-goes-viral Cinibazaar
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಇದಕ್ಕೆ ಪ್ರಸ್ತುವ ಸ್ಯಾಮ್ ಕೈಯಲ್ಲಿರುವ ಪ್ರಾಜೆಕ್ಟ್ ಗಳೇ ಉದಾಹರಣೆ. ಸ್ಯಾಮ್ ಕೈಯಲ್ಲಿ ಈಗ ಅರ್ಧ ಡಜೆನ್ ಗೂ ಹೆಚ್ಚು ಪ್ರಾಜೇಕ್ಟ್ ಗಳಿವೆ. ಅದರಲ್ಲೂ ನಟ ನಾಗ್ ಚೇತನ್ಯ ಅವರೊಂದಿಗಿನ ಡೈವೋರ್ಸ್ ಬಳಿಕ ಸಮಂತಾ ಮತ್ತಷ್ಟು ಬಿಝಿಯಾಗಿದ್ದಾರೆ. ಟಾಲಿವುಡ್ ಜೊತೆಗೆ ಬಾಲಿವುಡ್, ಹಾಲಿವುಡ್ ನಲ್ಲೂ ತಮ್ಮ ಮುದ್ರೆ ಹಾಕಲು ಸ್ಯಾಮ್ ರೆಡಿಯಾಗುತ್ತಿದ್ದಾರೆ.
ಅಂದಹಾಗೆ ಚೇತು ಮತ್ತು ಸ್ಯಾಮ್ ಪ್ರೇಮ ವಿವಾಹ ಮಾಡಿದ್ದರು. ನಾಲ್ಕು ವರ್ಷ ಸಂಸಾರವನ್ನೂ ನಡೆಸಿದ್ದರು. ಆದ್ರೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಇಬ್ಬರೂ ವಿಚ್ಛೇಧನ ಪಡೆದುಕೊಂಡರು. ಇದಾದ ಬಳಿಕ ಮೀಡಿಯಾಗಳ ದೃಷ್ಠಿ ಈ ಇಬ್ಬರ ಮೇಲೆ ನೆಟ್ಟಿದೆ. ಅದರಲ್ಲೂ ಮುಖ್ಯವಾಗಿ ಸಮಂತಾ ಮೇಲೆ ಎಲ್ಲರ ಕಣ್ಣೀದೆ.
ಚೈ ಮತ್ತು ಸ್ಯಾಮ್ ವಿಚ್ಛೇದನವನ್ನು ಘೋಷಿಸಿದ್ದು ಅಕ್ಕಿನೇನಿ ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ವಿಚ್ಛೇದನಕ್ಕೆ ಕಾರಣ ಏನೇ ಇರಲಿ.. ಈ ಜೋಡಿ ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಸ್ಯಾಮ್ ಮತ್ತು ಚೇತನ್ಯ ಅನ್ಯೂನ್ಯವಾಗಿದ್ದ ಹಳೆಯ ಫೋಟೋ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ. ಈ ಹಿಂದೆ ಒಬ್ಬರ ಮೇಲೆ ಮತ್ತೊಬ್ಬರು ಮಾಡಿಕೊಂಡಿದ್ದ ಕ್ಯೂಟ್ ಕಮೆಂಟ್ ಗಳನ್ನ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಸಮಂತಾ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ್ದ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ. 2019ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಲೈವ್ ಚಾಟ್ ಗೆ ಬಂದಿದ್ದರು. ಆಸ್ಕ್ ಮಿ ಎನಿಥಿಂಗ್ ಹೆಸರನಲ್ಲಿ ಲೈವ್ ಚಾಟ್ ನಡೆಸಿದ್ದ ಸ್ಯಾಮ್ ಗೆ ಅಭಿಮಾನಿಯೊಬ್ಬ ಪ್ರೆಗ್ನೆನ್ಸಿ ಬಗ್ಗೆ ಪ್ರಶ್ನೆ ಕೇಳಿದ್ದ. ಇದಕ್ಕೆ ಸ್ಯಾಮ್ ಸ್ಪಂದಿಸುತ್ತಾ.. ನನ್ನ ದೇಹದಲ್ಲಿ ಬರುವ ಬದಲಾವಣೆಗಳಿಗಾಗಿ ನೀವು ಆಸಕ್ತಿಯಿಂದ ಎದುರು ನೋಡುತ್ತಿದ್ದೀರಾ ಅನ್ನೋದು ಅರ್ಥವಾಗುತ್ತಿದೆ. ಆ ನಿರೀಕ್ಷೆಯಲ್ಲಿರುವವರಿಗೆ ಒಂದು ಗುಡ್ ನ್ಯೂಸ್ ತಿಳಿಸುತ್ತೇನೆ. 2022 ಆಗಸ್ಟ್ 7 ರಂದು ಬೆಳಿಗ್ಗೆ ಏಳು ಗಂಟೆಗೆ ಒಂದು ಮಗುವಿಗೆ ಜನ್ಮ ನೀಡಲಿದ್ದೇನೆ ಎಂದು ಉತ್ತರ ನೀಡಿದ್ದರು. ಸದ್ಯ ಈ ಚಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಕ್ಕಿನೇನಿ ಅಭಿಮಾನಿಗಳು ಭಾವನಾತ್ಮಕವಾಗಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.