Sandalwood : ತುಂಬುಗರ್ಭಿಣಿ ಅಮೂಲ್ಯ ಫೋಟೋಶೂಟ್
ಬಾಲ ನಟಿಯಾಗಿ ನಟಿ ಅಮೂಲ್ಯ ಸ್ಯಾಂಡಲ್ ಗೆ ಎಂಟ್ರಿ ಕೊಟ್ಟ ನಟಿ ಅಮೂಲ್ಯ ಗ ಮತ್ತೆ ಸುದ್ದಿಯಾಗಿದ್ದಾರೆ. ಚೆಲುವಿನ ಚಿತ್ತಾರದಲ್ಲಿ ಗೊಲ್ಡನ್ ಸಾಟ್ಟಾರ್ ಗಣೇಶ ಅವರ ಜೊತೆ ನಾಯಕಿಯಾಗಿ ನಟಿಸಿದ ಅಮೂಲ್ಯ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದರು. ಈ ಚಿತ್ರವು ದೊಡ್ಡ ಹಿಟ್ ಆಗಿತ್ತು. ಅದಾದ ನಂತರ ದುನಿಯಾ ವಿಜಯ ಅವರೊಂದಿಗೆ ನಟಿಸಿದ ಮಾಸ್ತಿಗುಡಿ ಚಿತ್ರ ಕೂಡ್ ಸೂಪರ್ ಹಿಟ್ ಆಗಿತ್ತು.
ಮತ್ತೆ ಶ್ರಾವಣಿ ಸುಭ್ರಮಣ್ಯದಲ್ಲಿ ಒಂದಾದ ಚೆಲುವಿನ ಚಿತ್ತಾರದ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದರು. ಇದಾದ ನಂತರ 2017 ರಲ್ಲಿ ರಾಜಕೀಯ ಹಿನ್ನಲೆ ಉಳ್ಳ ಜಗದೀಶ್ ಜೊತೆ ಮದವೆ ನೆರವೇರಿತ್ತು.
ಇತ್ತೀಚಿಗಷ್ಟೇ ಸ್ಯಾಂಡಲವುಡ್ ನ ಚಲುವಿನ ಚಿತ್ತಾರದ ಬೆಡಗಿ ನಟಿ ಅಮುಲ್ಯಾ ಅವರ ಅದ್ಧೂರಿ ಸೀಮಂತ ಕಾರ್ಯಕ್ರಮ ನೆರವೇರಿತ್ತು . ಸೀಮಂತದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿತ್ತು.
ಈಗ ತುಂಬು ಗರ್ಬಿಣಿ ಅಮೂಲ್ಯ ಅವರು ಪೋಟೊಶೂಟ್ ಮಾಡಿಸಿದ್ದು, ಈ ಪೋಟೊಗಳು ವೈರಲ್ ಆಗುತ್ತಿವೆ. ಇದನ್ನು ಕಂಡ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ಅಮೂಲ್ಯ ಅವರನ್ನು ಅನೇಕ ಗೆಳತಿಯರು ಬಂದು ಭೇಟಿ ಮಾಡಿದ್ದಾರೆ. ಕಿರುತೆರೆ ನಟಿ ವೈಷ್ಣವಿ ಸೇರಿದಂತೆ ಚಿತ್ರರಂಗದ ಹಲವರು ಅಮೂಲ್ಯ ಅವರನ್ನು ಭೇಟಿಯಾದ ಫೋಟೋಗಳು ವೈರಲ್ ಆಗುತ್ತಿವೆ.