ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಶಾಂತ್ – ಮೊಹಮ್ಮದ್ ಮೊಬಿ ಯಾಗಿ ಹೊಸ ಅವತಾರ…
ಕ್ರಿಕೆಟ್ ಜಗತ್ತಿನಿಂದ ಬೆಡದ ಕಾರಣಕ್ಕೆ ದೂರವಾದ ಬಳಿಕ ಶ್ರೀಶಾಂತ್ ಈಗ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದಾರೆ. ನಟನೆಯಲ್ಲೂ ತುಂಬ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ ಶ್ರೀಶಾಂತ್. ಈ ಮೊದಲು ಅನೇಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವ ಅವರು ಈಗ ನೇರವಾಗಿ ಸ್ಟಾರ್ ನಟ, ನಟಿಯರ ಜೊತೆ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಲಿರುವ ಕಾತು ವಾಕುಲ ರೆಂಡು ಕಾದಲ್ ಸಿನಿಮಾದಲ್ಲಿ ಶ್ರೀಶಾಂತ್ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ನಯನತಾರ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಶ್ರೀಶಾಂತ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಚಿತ್ರತಂಡ ಬ್ರೇಕ್ ಹಾಕಿದೆ. ಇತ್ತೀಚೆಗಷ್ಟೆ ಹುಟ್ಟು ಹಬ್ಬ ಆಚರಿಸಿಕೊಂಡ ಶ್ರೀಶಾಂತ್ ಹುಟ್ಟುಹಬ್ಬದ ಪ್ರಯುಕ್ತ ಕಾತು ವಾಕುಲ ರೆಂಡು ವಾಕಲ್ ಚಿತ್ರ ತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಮೊಹಮ್ಮದ್ ನಬಿ ಎಂಬ ಪಾತ್ರದಲ್ಲಿ ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ. ಅವರ ಸಿನಿ ಪಯಣಕ್ಕೆ ಹಲವರು ಹಾರೈಸಿ ಶುಭ ಕೋರಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ನಿಜವಾದ ಚಾಂಪಿಯನ್ ಆಗಿದ್ದ ವ್ಯಕ್ತಿ ಈಗ ಸಿಲ್ವರ್ ಸ್ಕರೀನ್ ಆಳ್ವಿಕೆ ಮಾಡಲು ಹೋಗುತ್ತಿದ್ದಾರೆ. ಶ್ರಿಶಾಂತ್ ಅವರನ್ನ ಮೊಹಮ್ಮದ್ ನಬಿ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ ಎಂದು ರೌಡಿ ಪಿಚ್ಚರ್ಸ್ ಟ್ವೀಟರ್ ನಲ್ಲಿ ಬರೆದುಕೊಂಡಿದೆ.
ಈ ಸಿನಿಮಾದಲ್ಲಿ ಶ್ರೀಶಾಂತ್ ಮತ್ತು ಸಮಂತಾ ಮುಖಾಮುಖಿಯಾಗುತ್ತಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ಮೇಲ್ನೋಟಕ್ಕೆ ಇದು ತ್ರಿಕೋನ ಪ್ರೇಮ ಕಥೆ ಎನ್ನುವಂತೆ ಕಾಣಿಸುತ್ತಿದೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. 2022 ರ ಏಪ್ರಿಲ್ ಈ ಚಿತ್ರವನ್ನ ಬಿಡುಗಡೆಗೊಳಿಸುವ ಪ್ಲಾನ್ ಚಿತ್ರತಂಡದ್ದು..
ಫೆಬ್ರವರಿ 11 ರಂದು ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಘೊಷಿಸಿದ್ದಾರೆ.