ವರನಟ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ನಿನ್ನೆಗೆ 46 ವರ್ಷ ಪೂರ್ಣ
ಮೈಸೂರು: ವರನಟ ಡಾ. ರಾಜಕುಮಾರ ಅವರಿಗೆ ಡಾಕ್ಟರೇಟ್ ಗೌರವ ನೀಡಿ ಇಂದಿಗೆ 46 ವರ್ಷ ಪೂರ್ಣಗೊಂಡಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಹೇಳಿದ್ದಾರೆ.
ಮೇರುನಟ ಡಾ. ರಾಜಕುಮಾರ ಅವರಿಗೆ 1976ರ ಫೆಬ್ರವರಿ 8 ರಂದು ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿ ಸನ್ಮಾನಿಸಿತ್ತು. ಡಾಕ್ಟರೇಟ್ ಗೌರವ ನೀಡಿದ ಕಾರ್ಯಕ್ರಮದಲ್ಲಿ ಅಂದಿನ ರಾಜ್ಯಪಾಲರಾದ ಡಾ. ಉಮಾಶಂಕರ ದೀಕ್ಷಿತ್, ಅಂದಿನ ವಿವಿ ಕುಲಪತಿಗಳಾದ ಡಾ. ಡಿ.ವಿ. ಅರಸು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಅಣ್ಣಾವರು ಅಭಿಮಾನಿಗಳ ಪಾಲಿಕೆ ದೇವರಾಗಿದ್ದರು. ಇವರು ಅಭಿಮಾನಿಗಳನ್ನ ದೇವರಂತ ಕರೆದರೇ, ಅಭಿಮಾನಿಗಳು ಅಣ್ಣವರನ್ನಾ ದೇವರಂತೆ ಕಾಣುತ್ತಿದ್ದರು. ವರನಟ ಅಭಿನಯಿಸಿದ ಚಿತ್ರಗಳೆಲ್ಲವು ಜನಕ್ಕೆ ಮಾದರಿಯಾಗಿದ್ದವು. ಅಣ್ಣಾವ್ರು ಅಭಿನಯಿಸಿದ “ಬಂಗಾರದ ಮನುಷ್ಯ” ಚಿತ್ರ ನೋಡಿ ಸಾಕಷ್ಟು ತರುಣರು ಕೃಷಿಯತ್ತ ವಾಲಿದ್ದನ್ನಾ ನೋಡಬಹುದು.
ಇಂತಹ ಮೇರು ವ್ಯಕ್ತಿತ್ವ, ಅಭಿಮಾನಿ ದೇವರಿಗೆ ಸ್ಪೂರ್ತಿಯ ಚಿಲುಮೆಯಾದಂತಹ ಅಣ್ಣಾವರಿಗೆ ಡಾಕ್ಟರೇಟ್ ಗೌರವ ನೀಡಿ ಇಂದಿಗೆ 46 ವರ್ಷ ಕಳೆದಿದೆ ಎಂದು ಇಂದಿನ ಮೈಸೂರು ವಿವಿ ಕುಲಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ರಾಜಕುಮಾರ ಅವರ ಜೊತೆಗೆ ಅಂದಿನ ಮುಂಬೈನ ಬಾಬಾ ಅಟಾಮಿಕ್ ಎನರ್ಜಿ ಸೆಂಟರ್ ನಿರ್ದೇಶಕರಾದ ಡಾ. ಎಚ್.ಎನ್. ಸೇತ್ನಾ, ವಿ. ಸೀತಾರಾಮಯ್ಯ, ಎಂ.ಎಚ್. ಗೋಪಾಲ್ ಅವರಿಗೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು.