ಸಿನಿ ಪ್ರಿಯರು ಮೆಚ್ಚಿದ “ಗಿಲ್ಕಿ” ಟ್ರೈಲರ್ gilky kannada movie trailer review
ಸಾಮಾನ್ಯವಾಗಿ ಕನ್ನಡದಲ್ಲಿ ಕಂಟೆಂಟ್ ಬೇಸ್ಡ್ ಸಿನಿಮಾಗಳ ಕೊರತೆ ಇದೆ ಅನ್ನೋ ಆರೋಪ ಇದೆ. ಇದಕ್ಕಾಗಿಯೇ ಕನ್ನಡ ಪ್ರೇಕ್ಷಕರು ಬೇರೆ ಭಾಷೆಯ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ ಅನ್ನೋ ವಾದವೂ ಚಾಲ್ತಿಯಲ್ಲಿದೆ.
ಆದ್ರೆ ಇದಕ್ಕೆಲ್ಲಾ ಚೆಕ್ ಮೇಟ್ ಇಡುವಂತೆ ನಮ್ಮಲ್ಲೂ ಇತ್ತೀಚೆಗೆ ಕಂಟೆಂಟ್ ಆಧಾರಿತ ಸಿನಿಮಾಗಳು ಸೌಂಡ್ ಮಾಡಲು ಶುರುವಾಗಿದೆ.
ಇದಕ್ಕೆ ಕನ್ನಡ ಸಿನಿ ಪ್ರೇಕ್ಷಕರ ಬೆಂಬಲ ಬೇಕಿದೆ ಅಷ್ಟೆ. ಅಂದಹಾಗೆ ಈ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಕೇವಲ ಹೊಸ ಪ್ರತಿಭೆಗಳು ಮಾತ್ರ ಟ್ರೈ ಮಾಡುತ್ತಿದ್ದಾರೆ. ಸ್ಟಾರ್ ನಟರು ಮಾತ್ರ ಮಾಸ್ ಮೂವಿಗೆ ಅಂಟಿಕೊಂಡು ನೇತಾಡುತ್ತಿದ್ದಾರೆ.
ಅಂದಹಾಗೆ ಗಾಂಧಿ ನಗರದಲ್ಲಿ ಸದ್ಯ ಸಿನಿಮಾವೊಂದರ ಟ್ರೈಲರ್ ಭಾರಿ ಸದ್ದು ಮಾಡುತ್ತಿದೆ. ಟ್ರೇಲರ್ ಗೆ ಸ್ಟಾರ್ ನಟರು, ಸಿನಿ ಪ್ರಿಯರು, ವಿಮರ್ಶಕರು ಇಂಪ್ರೆಸ್ ಆಗಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಬೇರೆ ಯಾವುದಲ್ಲ, ವೈ.ಕೆ.ನಿರ್ದೇಶನದ ತಾರಕ್ ಪೊನ್ನಪ್ಪ ನಟನೆಯ ಗಿಲ್ಕಿ ಸಿನಿಮಾ.
ಹೌದು…! ಗಿಲ್ಕಿ ಸಿನಿಮಾದ ಟ್ರೈಲರ್ ಸದ್ಯ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಪ್ರತಿಯೊಬ್ಬರು, ಪಾಸಿಟಿವ್ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಇದೊಂದು ಭಿನ್ನ ಕತೆ ಹೊಂದಿರುವ ಭರವಸೆ ಸಿನಿಮಾ ಎನ್ನುತ್ತಿದ್ದಾರೆ.
ಸೃಷ್ಠಿ ಒಂದು ಅದ್ಭುತ, ನಾವೆಲ್ಲಾ ಆಚರಣೆಗಳಷ್ಟೆ, ಹುಟ್ಟಿದ್ ಮೇಲೆ ತೊಟ್ಟಿಲು, ಸತ್ ಮೇಲೆ ಚಟ್ಟ. ಬದುಕು ಸುಂದರವಾಗಿದ್ರೆ ಸಾವು ಆದರ್ಶವಾಗಿರುತ್ತೆ, ಒಳ್ಳೆತನ ಅನ್ನೋದು ಒಣಗಿರುವ ಸೌದೆತರ, ಅದು ನೆನಪಾಗೋದೇ ಹೆಣ ಸುಡುವಾಗ ಅನ್ನೋ ಡೈಲಾಗ್ ನಿಂದ ಶುರುವಾಗುವ ಗಿಲ್ಕಿ ಟ್ರೈಲರ್ ನಲ್ಲಿ.. ಶಿಲುಬೆಗೆ ನೇತು ಬಿದ್ದ ಏಸು, ಪಂಜರದಲ್ಲಿ ಬಂಧಿಯಾಗಿರುವ ಕೋಳಿ, ಕೋಣೆಯೊಳಗೆ ನಿಂತ ಕತ್ತೆ, ಮಹಿಳೆ ಗೋಡೆಯೆಡೆಗೆ ತಿರುಗಿ ಸೀರೆ ಕಳಚುವ ದೃಶ್ಯ, ಇದರ ಮಧ್ಯೆ ಬುದ್ಧಿ ಇಲ್ಲದವ ದಡ್ಡನಲ್ಲ, ಸಂಪಾದನೆ ಇಲ್ಲದವ ದಡ್ಡ ಅನ್ನೋ ಮತ್ತೊಂದು ಡೈಲಾಗ್, ನಟ ಗಿಲ್ಕಿ ಅಂತಾ ಪರಿಚಯ ಮಾಡಿಕೊಳ್ಳುವುದು, ತೆಪ್ಪದಲ್ಲಿ ಕೂತು ನಗುವ ನಾಯಕಿ ಹೀಗೆ ಎಲ್ಲವೂ ಸುಂದರವಾಗಿದೆ. ಜೊತೆ ಸಂಗೀತ ಕೂಡ ಮಧುರವಾಗಿದೆ.
ಒಟ್ಟಿನಲ್ಲಿ ಗಿಲ್ಕಿ ಸಿನಿಮಾದ ಟ್ರೈಲರ್ ಸಂಥಿಂಗ್ ಡಿಫರೆಂಟ್ ಆಗಿದೆ. ಹೀಗಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.