ಮಹೇಶ್ ಬಾಬು – ನಮ್ರತಾ ಶಿರೋಡ್ಕರ್ ವಿವಾಹ ವಾರ್ಷಿಕೋತ್ಸವಕ್ಕೆ 17 ವರ್ಷ
ದಕ್ಷಿಣ ಭಾರತದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿರುವ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಮಾಜಿ ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ವಿವಾಹವಾಗಿ ಇಂದಿಗೆ 17 ವರ್ಷ ಪೂರೈಸಿದ್ದಾರೆ.
2005 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೊಡಿ ಯಶಸ್ವಿಯಾಗಿ 17 ವರ್ಷಗಳನ್ನ ಪೂರೈಸಿದೆ. ನಮತ್ರಾ, ಮಹೇಶ್ ಬಾಬು ಮತ್ತು ಕುಟುಂಬಕ್ಕೆ ಆಧಾರಸ್ತಂಭದಂತೆ ನಿಂತಿದ್ದಾರೆ.
ವಿವಾಹ ವಾರ್ಷಿಕೋತ್ಸವದ ವಿಶೇಷ ಸಂದರ್ಭದಲ್ಲಿ ಮಹೇಶ್ ಬಾಬು ಜೊತೆ ಕಳೆದ ಸುಂದರ ಕ್ಷಣಗಳನ್ನ ನಟಿ ನಮ್ರತಾ ಹಂಚಿಕೊಂಡಿದ್ದಾರೆ. ವಾರ್ಷಿಕೋತ್ಸವದ ಶುಭಾಶಯಗಳು ತುಂಬಾ ಸುಲಭವಾಗಿ 17 ವರ್ಷ ಕಳೆದವು ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
ಮದುವೆ ಪೋಟೋಗಳನ್ನ ನಮ್ರತಾ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಬಿಳಿ ಧೋತಿ ಕುರ್ತಾದಲ್ಲಿ ಕಾಣಿಸಿಕೊಂಡರೆ, ನಮ್ರತಾ ಬಿಳಿ ಮತ್ತು ಹಸಿರು ಸೀರೆಯನ್ನು ಧರಿಸಿದ್ದರು. ನಮ್ರತಾ ಮಹೇಶ್ ಬಾಬು ಗಿಂತ 4 ವರ್ಷ ದೊಡ್ಡವರು.
2000 ದಲ್ಲಿ ವಂಶಿ ಚಿತ್ರದ ಸೆಟ್ ನಲ್ಲಿ ಮೊದಲ ಭಾರಿಗೆ ಇಬ್ಬರೂ ಮುಖಾಮುಖಿಯಾಗಿದ್ದರು. ಇಲ್ಲಿ ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಶುರುವಾಯಿತು. ಮೊದ ಮೊದಲು ಈ ಜೋಡಿ ಮಾಧ್ಯಮಗಳ ಮುಂದೆ ಪ್ರೀತಿಯನ್ನ ಒಪ್ಪಿಕೊಳ್ಳದೇ ಇದ್ದರೂ, 5 ವರ್ಷಗಳ ನಂತರ ಈ ಜೋಡಿ ಮದುವೆಯಾಗಲು ನಿರ್ಧರಿಸಿದರು.
ಮದುವೆ ನಂತರ ನಂತರ ನಮ್ರತಾ ಯಾವುದೇ ಚಿತ್ರಗಳಲ್ಲಿ ನಟಿಸದೆ ಮಹೇಶ್ ಬಾಬು ಅವರ ಷರತ್ತನ್ನ ಒಪ್ಪಿಕೊಂಡಿದ್ದಾರೆ. ದಂಪತಿಗಳಿಗೆ ಗೌತಮ್ ಮತ್ತು ಸಿತಾರ ಎಂಬ ಮುದ್ದಾದ ಒಂದು ಗಂಡು ಹೆಣ್ಣು ಮಕ್ಕಳಿದ್ದಾರೆ.