ದೇಶದ ಯುವಕರು ಇಬ್ಭಾಗವಾಗ್ತಿರುವುದು ಬೇಸರ : ರಮ್ಯಾ
ಬೆಂಗಳೂರು : ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಿನಿಮಾರಂಗ ರಾಜಕಾರಣದಿಂದ ದೂರವೇ ಉಳಿದರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ… ಆಗಾಗ ಅನೇಕ ತಮಗೆ ತಪ್ಪೆನಿಸಿದ ವಿಚಾರಗಳನ್ನ ಖಂಡಿಸುತ್ತಾ ಬಂದಿದ್ದಾರೆ..
ಇದೀಗ ರಾಜ್ಯದಲ್ಲಿ ಭುಗಿಲೆದ್ದು ಸಮವಸ್ತ್ರ ಸಮರದ ಬಗ್ಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ..
ವೀಡಿಯೋವೊಂದನ್ನು ಟ್ವೀಟ್ ಮಾಡಿರುವ ರಮ್ಯಾ, ಭಾರತದ ಯುವಕರು ಈ ರೀತಿ ಇಬ್ಭಾವಾಗುತ್ತಿರುವುದನ್ನು ನೋಡುತ್ತಿದ್ದರೆ ತುಂಬಾ ಬೇಸರವಾಗುತ್ತದೆ ಎಂದು ಹೇಳಿದ್ದಾರೆ.
ಕೇವಲ ರಮ್ಯಾ ಅಷ್ಟೇ ಅಲ್ಲ ಅನೇಕ ನಟ – ನಟಿಯರು ಈ ಬಗ್ಗೆ ತಮ್ಮ ನಿಲುವುಗಳನ್ನ ತಿಳಿಸಿದ್ದಾರೆ.. ಬಹುಭಾಷಾ ನಟ ಕಮಲ್ ಹಾಸನ್ ಇದೇ ವಿಚಾರವಾಗಿ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ..ಕರ್ನಾಟಕದಂತ ಬೆಳವಣಿಗೆ ಇಲ್ಲಿಯೂ ಆಗದಂತೆ ಎಚ್ಚರವಹಿಸಿ ಎಂದಿದ್ದಾರೆ.
ಮತ್ತೊಂದೆಡೆ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ… ಹೀಗಾಗಿ ಇಂದು ಶಾಲಾ ಕಾಲೇಜುಗಳ ಆವಾರಣದ ಬಳಿ ಕೊಂಚ ಶಾಂತಿಯುತ ವಾತಾವರಣ ಕಂಡು ಬಂದಿದೆ. ಪ್ರಕರಣ ಸದ್ಯ ಹೈ ಕೋರ್ಟ್ ನಲ್ಲಿದ್ದು ಇಂದು ವಿಚಾರಣೆ ನಡೆಸಿ ನ್ಯಾಯಪೀಠ ಪ್ರಕರಣವನ್ನ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.