ಸಮಂತಾ ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳಿವು…
ಸಿನಿಮಾರಂಗದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಸೌತ್ ಸಿನಿಮಾದ ನಟಿ ಸಮಂತಾಗೆ ಈಗಲೂ ಅಷ್ಟೇ ಡಿಮ್ಯಾಂಡ್ ಇದೆ.. ಬಹುಬೇಡಿಕೆಯ ನಟಿಯಾಗಿರುವ ಸಮಂತಾ ಸದ್ಯ ಡಿವೋರ್ಸ್ ಆದ ನಂತರ ಮತ್ತೆ ವೃತ್ತಿ ಜೀವನದಲ್ಲಿ , ಸೋಷಿಯಲ್ ಮೀಡಿಯಾದಲ್ಲಿ ಪ್ರೋ ಆಕ್ಟೀವ್ ಆಗಿದ್ದಾರೆ..
ಅನೇಕ ಸ್ಟಾರ್ ನಟರ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿರೋ ಸಮಂತಾ ,,, ಅದರಂತೆಯೇ ಅನೇಕ ಸಿನಿಮಾಗಳನ್ನ ರಿಜೆಕ್ಟ್ ಸಹ ಮಾಡಿದ್ದಾರೆ.. ಆದ್ರೆ ಅವರು ರಿಜೆಕ್ಟ್ ಮಾಡಿರುವ ಸಿನಿಮಾಗಳು ಬ್ಲಾಕ್ ಬಾಸ್ಟರ್ ಎನಿಸಿಕೊಂಡು , ಇಂಡಸ್ಟ್ರಿಯಲ್ ಹಿಟ್ ಆಗಿ ಹೊರಹೊಮ್ಮಿದೆ..
ಹಾಗಾದ್ರೆ ಸಮಂತಾ ರಿಜೆಕ್ಟ್ ಮಾಡಿದ ಆ ಸೂಪರ್ ಹಿಟ್ ಸಿನಿಮಾಗಳು ಯಾವುವು..??
ಮೊದಲನೇಯದ್ದಾಗಿ 2021 ರ ಡಿಸೆಂಬರ್ ನಲ್ಲಿ ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಊಟಿ ಮಾಡಿದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ… ಹೌದು ,,, ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಿಭಾಯಿಸಿರುವ ಶ್ರೀವಲ್ಲಿಯ ಪಾತ್ರದ ಆಫರ್ ಮೊದಲಿಗೆ ಸಮಂತಾಗೆ ಸಿಕ್ಕಿತ್ತು.. ಆದ್ರೆ ಸಮಂತಾ ಈ ಆಫರ್ ನಿರಾಕರಿಸಿದ ನಂತರ ಲಕ್ಕಲ್ಲಿ ಈ ಚಾನ್ಸ್ ರಶ್ಮಿಕಾಗೆ ಒಲಿಯಿತು.. ಇದೀಗ ಸಿನಿಮಾ ಮೂಲಕ ರಶ್ಮಿಕಾ ದೊಡ್ಡ ಹಿಟ್ ಪಡೆಯೋ ಜೊತೆಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡರು.. ಆದ್ರೆ ಈ ಸಿನಿಮಾದ ಹೈಲೇಟ್ ಆದವರು ಅಲ್ಲೂ ಬಿಟ್ಟರೆ , ಸಮಂತಾನೇ.. ಕಾರಣ ಸಿನಿಮಾದಲ್ಲಿ ವಿಶೇಷ ಹಾಡು ಊ ಅಂಟಾವಾ ಮಾವ ಹೂ ಅಂಟಾವಾ ಮಾವ ಹಾಡಿಗೆ ಅವರು ಡ್ಯಾನ್ಸ್ ಮಾಡಿರೋದು.. ಹಾಡಿನಲ್ಲಿ ಸಮಂತಾ ಸಖತ್ ಗ್ಲಾಮರಸ್ ಅಂಡ್ , ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಮಸ್ತ್ ಸ್ಟೆಪ್ಸ್ ಹಾಕಿದ್ದರು.. ಸುಕುಮಾರ್ ನಿರ್ದೇಶನದ ಸಿನಿಮಾ ಹಿಂದಿ ಅವತರಣಿಕೆಯಿಂದಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು , ಇದೀಗ ಅಮೇಜಾನ್ ನಲ್ಲಿ ಯಶಸ್ವಿಯಾಗಿ ಸ್ಟ್ರೀಮ್ ಆಗ್ತಿದೆ..
ಅಂದ್ಹಾಗೆ ಈ ಹಿಂದೆ ಇಂಡ್ಸ್ಟರಿಯಲ್ಲಿ ಸೆನ್ಷೇಷನ್ ಹುಟ್ಟುಹಾಕಿದ್ದ , ರಾಮ್ ಚರಣ್ , ಅಲ್ಲು ಅರ್ಜುನ್ ಇಬ್ಬರು ಸೂಪರ್ ಸ್ಟಾರ್ ಗಳು ನಟಿಸಿದ್ದ ‘ಯವುಡು’ ಸಿನಿಮಾಗೂ ಮೊದಲು ಆಫರ್ ಸಿಕ್ಕಿದ್ದೇ ಸಮಂತಾಗೆ.. ಆದ್ರೆ ಸಮಂತಾ ಕೊನೆ ಕ್ಷಣದಲ್ಲಿ ಸಮಂತಾ ಸಿನಿಮಾದಿಂದ ಹೊರನಡೆದು ಈ ಚಾನ್ಸ್ ಶೃತಿ ಹಾಸನ್ ಅವರಿಗೆ ಒಲಿಯಿತು.. ವಂಶಿ ನಿರ್ದೇಶಿಸಿದ್ಧ ಈ ಸಿನಿಮಾದ ಬಜೆಟ್ 30 ಕೋಟಿ. ಗಳಿಸಿದ್ದು 60 ಕೋಟಿಗೂ ಹೆಚ್ಚು.
ಚಿಯಾನ್ ವಿಕ್ರಂ ಅಭಿನಯದ ‘ಐ’ ಸಿನಿಮಾ ವಿಭಿನ್ನ ಕಾನ್ಸೆಪ್ಟ್ ನಿಂದ ಹೊಸ ಸೆನ್ಷೇಷನ್ ಹುಟ್ಟುಹಾಕಿತ್ತು.. ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಸಮಂತಾ ನಟಿಸಲು ಹಿಂದೇಟು ಹಾಕಿದರು.. ಅದಾದ ನಂತರ ಆಮಿ ಜಾಕ್ಸನ್ ಸಿನಿಮಾದಲ್ಲಿ ನಾಯಕಿಯಾದರು..