ಧರ್ಮ ಕೀರ್ತಿರಾಜ್ ನಾಯಕರಾಗಿ ನಟಿಸಿರುವ “ಖಡಕ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. Dharma Keerthiraj Khadak- kannada film song-release Cinibazaar
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಮರಿ ಟೈಗರ್ ವಿನೋದ್ ಪ್ರಭಾಕರ್,
ನಟ ಪ್ರಥಮ್ , ನಮ್ಮ ಫ್ಲಿಕ್ಸ್ ನ ವಿಜಯ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಚಿತ್ರರಂಗ ಕೊರೋನ ಸಮಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ಈಗ ಮತ್ತೆ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನಿರ್ಮಾಪಕ ವಲ್ಲಿ, ನನ್ನ ಅನೇಕ ಚಿತ್ರಗಳಿಗೆ ವಸ್ತ್ರಾಲಂಕಾರ ಮಾಡಿದ್ದಾರೆ. ತಾವು ಚಿತ್ರರಂಗದಲ್ಲಿ ದುಡ್ಡಿದ್ದ ದುಡ್ಡನ್ನು ಮತ್ತೆ ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾರೈಸಿದರು.
ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನನ್ನ ಹಾಗೂ ಧರ್ಮನ ಸ್ನೇಹ ತುಂಬಾ ವರ್ಷಗಳದ್ದು. ನಾನು ಇಲ್ಲಿಗೆ ಬರಲು ಆ ಸ್ನೇಹವೇ ಕಾರಣ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ವಿನೋದ್ ಪ್ರಭಾಕರ್.
ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ನೋಡಿ ಹಾರೈಸಿ ಎಂದರು ನಾಯಕ ಧರ್ಮ ಕೀರ್ತಿರಾಜ್. ತಮ್ಮ ಪಾತ್ರದ ಬಗ್ಗೆ ನಾಯಕಿ ಅನೂಶ ರೈ ವಿವರಣೆ ನೀಡಿದರು. ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ ಎಂ.ಎನ್ ಕೃಪಾಕರ್ ವಿವರಣೆ ನೀಡಿದರು.
ನಂದಿನಿ ಕಂಬೈನ್ಸ್ ಮೂಲಕ ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಟಿ.ಎನ್ ನಾಗೇಶ್ ನಿರ್ದೇಶಿಸಿದ್ದಾರೆ. ಎಂ.ಎನ್.ಕೃಪಾಕರ್ ಸಂಗೀತ ನಿರ್ದೇಶನ ಹಾಗೂ ಶಂಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಧರ್ಮ ಕೀರ್ತಿರಾಜ್, ಅನೂಶ ರೈ, ಕಬೀರ್ ದುಹಾನ್ ಸಿಂಗ್, ಸುಮನ್, ಕಮಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಮ್ಮ ಮ್ಯೂಸಿಕ್ ಸಂಸ್ಥೆ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.
Dharma Keerthiraj Khadak- kannada film song-release