James | ಗನ್.. ಗಟ್ಸ್.. ಪೈಟ್ಸ್.. ಪವರ್..!! ಹೇಗಿದೆ ಜೇಮ್ಸ್ ಟೀಸರ್..
ನೂರು ಜನ ಗನ್ ಹಿಡ್ಕೊಂಡಿರೋ ವೇಸ್ಟ್ ಬಾಡಿಗಳಿಗಿಂತ,.. ಒಬ್ಬ ಗನ್ ಥರ ಇರೋ ವ್ಯಕ್ತಿನ ಹುಡ್ಕೊಡಿ ಎದೆ ಕೊಟ್ ಕಾಪಾಡೋಕು ಗೊತ್ತಿರ್ಬೇಕು, ಎದುರಾಳಿ ಎದೆಗೆ ಬುಲೆಟ್ ನುಗ್ಸೋದು ಗೊತ್ತಿರ್ಬೇಕು… ಗಟ್ಸ್ ಅವ್ನ ಟ್ರೇಡ್ ಮಾರ್ಕ್.. ನನಗೆ ಮೊದ್ಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ… James Official Teaser reviwe punith Raj kumar
ಎಸ್.. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗಳನ್ನ ತಣಿಸುತ್ತಾ, ರಾಜ್ ಕುಟುಂಬದ ಕುಡಿ.. ಕರುನಾಡ ಕಣ್ಮನಿ.. ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಟೀಸರ್ ಬಂದೇ ಬಿಡ್ತು..
ಪಿಆರ್ ಕೆ ಆಡಿಯೋ ಚಾನೆಲ್ ನಲ್ಲಿ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ಹೇಗಿದೆ ಅನ್ನೋದಕ್ಕಿಂತ ಹೆಚ್ಚಾಗಿ ಟೀಸರ್ ಅಪ್ಪುಮಯವಾಗಿದೆ. He comes ಪವರ್.. ಪವರ್.. ಅಂತಾ ಬರೋ BGM. ಗನ್.. ಗಟ್ಸ್.. ಪೈಟ್ಸ್.. ಪವರ್..!! ಪವರ್ ಸ್ಟಾರ್ ಟೀಸರ್ ನ ಹೈಲೆಟ್ಸ್..!!
ಟೀಸರ್ನಲ್ಲಿ We request santosh sir to take charge… ಅನ್ನುವಾಗ ಅಪ್ಪು ಮೆಟ್ಟಿನಿಂದ ಇಳಿಯೋ ಸೀನ್. ಇದಾದ ಬಳಿಕ ಜೆ ವಿಂಗ್ಸ್ ಅನ್ನೋ ಸೆಕ್ಯೂಟಿರ್ ಏಜೆನ್ಸಿ ಇದೆ ಸರ್ ಅಲ್ಲೊಬ್ಬ ಪವರ್ ಫುಲ್ ಪರ್ಸನ್ ಇದ್ದಾನೆ ಅನ್ನೋ ಡೈಲಾಗ್ ಶುರುವಾದಗ ಅಪ್ಪು ಬುಲೆಟ್ ನಲ್ಲಿ ಬರ್ತಾರೆ ಗನ್ ಹಿಡೀತಾರೆ. ಗಟ್ಸ್ ಅವ್ನ ಟ್ರೇಡ್ ಮಾರ್ಕ್ ಅಂತ ಶುರುವಾಗೋ ಡೈಲಾಗ್ ನಿಂದ ಕಾರಿನಲ್ಲಿ ಅಪ್ಪು ಫೇಸ್ ರಿವೀಲ್ ಆಗುತ್ತೆ. ಅಲ್ಲಿಂದ ಟೀಸರನ್ನ ಅಪ್ಪು ಆವರಿಸಿಕೊಳ್ಳುತ್ತಾರೆ. ಆಕ್ಷನ್ ಸೀನ್ ಗಳು.. ಕುದುರೆಗಳ ಮಧ್ಯೆ ಓಡೋ ಸೀನ್ ಸೂಪರ್ ಆಗಿದೆ. ಕೊನೆಯಲ್ಲಿ ಶಿವಣ್ಣನ ವಾಯ್ಸ್ ನಲ್ಲಿ ಬರೋ ನನ್ಗೆ ಮೊದನಿಂದಾನೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ ಅನ್ನೋ ಡೈಲಾಗ್ ಚಿಂದಿಯಾಗಿದೆ.
ಒಟ್ಟಲ್ಲಿ ಜೇಮ್ಸ್ ಟೀಸರ್.. ಪವರ್ ಪ್ಯಾಕ್ಡ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಮಾಡಿದೆ. James Official Teaser reviwe punith Raj kumar cinibazaar
ಇನ್ನು ಚೇತನ್ ಕುಮಾರ್ ನಿರ್ದೇಶದ ಜೇಮ್ಸ್ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಶರತ್ ಕುಮಾರ್, ಶ್ರೀಕಾಂತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಟೀಸರ್ ನಲ್ಲಿ ಗೊತ್ತಾಗುತ್ತಿದೆ.