ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲವ್ ಮಾಕ್ಟೇಲ್’ ನಟಿ ಸುಷ್ಮಿತಾ ಗೌಡ
ಲವ್ ಮಾಕ್ಟೇಲ್ ಸಿನಿಮಾ ಯಶಸ್ಸು ಕಂಡ ನಂತರ ಚಿತ್ರ ತಂಡ ಲವ್ ಮಾಕ್ಟೇಲ್ 2 ಬಿಡುಗಡೆ ಮಾಡಿತು. ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ಸುಷ್ಮಿತಾ ಗೌಡ ಜಂಕಣ ಅಲಿಯಾಸ್ ಜಂಕಿ ಎಂಬ ಪಾತ್ರವನ್ನು ಸುಷ್ಮಿತಾ ನಿಭಾಯಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವ ಹುಡುಗಿಯಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಮಾಡಿರುವ ಮ್ಯಾಚ್ ಮೇಕರ್ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತಿದೆ. ಈ ಮೂಗುತಿ ಸುಂದರಿಯ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದ್ದು ಅವರ ಜನಪ್ರಿಯತೆ ಹೆಚ್ಚಿದೆ.
‘ಲವ್ ಮಾಕ್ಟೇಲ್ 2’ ಸಿನಿಮಾ ಬಿಡುಗಡೆಯಾದ ಖುಷಿ ಒಂದೆಡೆಯಾದರೆ ಈಗ ಅವರು ಡಬಲ್ ಸಂಭ್ರಮದಲ್ಲಿದ್ದಾರೆ. ಹೌದು ಸುಷ್ಮಿತಾ ಗೌಡ ಅವರು ದಾಂಪತ್ಯದ ಅಧ್ಯಾಯ ಆರಂಭಿಸಿದ್ದಾರೆ. ಸುಷ್ಮಿತಾ ಗೌಡ ಅವರ ವಿವಾಹ ತುಂಬ ಅದ್ದೂರಿಯಾಗಿ ನೆರವೇರಿದೆ. ಸುಷ್ಮಿತಾ ಗೌಡ ಅವರು ಅಶ್ವಿನ್ ಗೌಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸಂಭ್ರಮದ ಕ್ಷಣಕ್ಕೆ ಆಶಿಕಾ ರಂಗನಾಥ್, ಅನುಷಾ ರಂಗನಾಥ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾದರು.
ಇವರ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಅವು ವೈರಲ್ ಆಗಿವೆ. ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.