‘ಮೆಗಾ’ ಲೆವೆಲ್ ಭಿಕ್ಷಾಟನೆ : ಚಿರಂಜೀವಿ ಟೀಕಿಸಿದ RGV
ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹಾಗೂ ಸಿನಿಮಾರಂಗದ ನಡುವೆ ಟಿಕೆಟ್ ದರ ನಿಗದಿ ಫೈಟ್ ಇದ್ದು , ಸಿನಿಮಾರಂಗದ ದಿಗ್ಗಜರ ಜೊತೆಗೆ ಸಿಎಂ ಜಗನ್ ಮೋಹನ್ ರೆಡ್ಡಿ ಇತ್ತೀಚೆಗೆ ಚರ್ಚೆ ನಡಡೆಸಿದ್ದಾರೆ.. ಇತ್ತೀಚೆಗೆ ಮೆಗಾ ಸ್ಟಾರ್ ಚಿರಂಜೀವಿ ಅವರ ಮಾತಿಗೆ ಶಿರಭಾಗಿ ಸ್ಟಾರ್ ನಟರ ದಂಡು ಜಗನ್ ಮೋಹನ್ ರೆಡ್ಡಿ ಭೇಟಿ ಮಾಡಿದ್ದರು… ಚಿರಂಜೀವಿ ಅವರ ಜೊತೆಗೆ , ಮಹೇಶ್ ಬಾಬು , ಪ್ರಭಾಸ್, ನಿರ್ದೇಶಕ ಎಸ್ ಎಸ್ ರಾಜಮೌಳಿ ಸೇರಿದಂತೆ ಅನೇಕರು ತೆರಳಿದ್ದರು.. ಜಗನ್ ಬಳಿ ಸಿನಿಮಾ ರಂಗಕ್ಕೆ ಆಗುವ ಸಮಸ್ಯೆ ಬಗ್ಗೆ ವಿವರಿಸಿದ್ದರು..
ಅದಕ್ಕೆ ಜಗನ್ ಮೋಹನ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗ್ತಿದ್ದು , ಇನ್ನೂ ಕೆಲವೇ ದಿನಗಳಲ್ಲಿ ಹೊಸ ನೀತಿ ಪ್ರಕಟಿಸುವ ಸಾಧ್ಯತೆ ಇದೆ. ಆದ್ರೆ ಪ್ರತಿ ವಿಚಾರದಲ್ಲೂ ಕಾಂಟ್ರವರ್ಸಿ ಮಾಡಿಕೊಳ್ತಾ , ಪ್ರತಿ ವಿಚಾರದಲ್ಲೂ ನೆಗೆಟಿವ್ ಆಗಿಯೇ ಮಾತನಾಡ್ತಾ ,,, ವಿವಾದಗಳನ್ನೇ ಪ್ರೀತಿಸುವ , ಕಾಂಟ್ರವರ್ಸಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಈ ವಿಚಾರವಾಗಿಯೂ ಟೀಕೆ ಮಾಡಿದ್ದು , ನೇರವಾಗಿ ಚಿರಂಜೀವಿ ಅವರಗೇ ಟಾಂಟ್ ಮಾಡಿದ್ದಾರೆ..
ಸಿ ಎಂ ಜೊತೆಗೆ ನಟರ ದಂಡು ಮಾತುಕತೆ ನಡೆಸಿದ ವಿಡಿಯೋವನ್ನು ಹಂಚಿಕೊಂಡಿರುವ RGV ‘ಸೂಪರ್, ಮೆಗಾ, ಬಾಹುಬಲಿ ಲೆವೆಲ್ ಭಿಕ್ಷಾಟನೆಯಿಂದ ಇದು ಸಾಧ್ಯವಾಗಿದೆ. ಅದರೂ ಮೆಗಾ ಸ್ಟಾರ್ ಸಿ.ಎಂ. ಜಗನ್ ಅವರು ಅವರನ್ನು ಆಶೀರ್ವದಿಸಿದ್ದು ನನಗೆ ಖುಷಿ ತಂದಿದೆ. ಸೂಪರ್, ಮೆಗಾ, ಬಾಹುಬಲಿಯ ಮಿಂಚಿನ ಮಹಾಬಲವನ್ನು ನಾನು ಪ್ರಶಂಸಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ ಇದಕ್ಕೂ ಮುಂಚೆ ರಾಮ್ ಗೋಪಾಲ್ ವರ್ಮಾ ಅವರು ಕೆಲವೊಂದು ಟ್ವಿಟ್ ಗಳನ್ನ ಮಾಡಿ ಡಿಲೀಟ್ ಸಹ ಮಾಡಿದ್ದರು.. ಅದ್ರಲ್ಲೂ ಒಂದು ಟ್ವೀಟ್ ನಲ್ಲಿ ಚಿರಂಜೀವಿ ರ್ ನಿಮ್ಮ ಮೆಗಾ ಭಿಕ್ಷಾಟನೆ ಕಂಡು ಓರ್ವ ಅಭಿಮಾನಿಯಾಗಿ ಬಹಳ ಬೇಸರವಾಯ್ತು… ಚಿಕ್ಕಣ್ಣ ಪವನ್ ಕಲ್ಯಾಣ್ ಹೇಗೆಲ್ಲಾ ಭಿಕ್ಷೆ ಬೇಡೋದಿಲ್ಲ… ಹಾಗಾಗಿಯೇ ಅವರು ತುಂಬಾ ಫೇಮಸ್ ಎಂದಿದ್ದರು.. ಆದ್ರೀಗ ಈ ಟ್ವೀಟ್ ಡಿಲೀಟ್ ಆಗಿದೆ..