ಜ್ಯೂ.NTR ಜೊತೆಗೆ ಸಿನಿಮಾ ಮಾಡವ ಆಸೆಯಂತೆ ‘ಪದ್ಮಾವತಿ’ಗೆ…!!!
ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಎಷ್ಟು ಬ್ಯುಸಿಯೆಸ್ಟ್ ನಟಿಯೋ ,,, ಅದಕ್ಕಿಂತ ತುಸು ಹೆಚ್ಚೇ ಬ್ಯುಸಿಯಾಗಿರೋ ನಟ ,, ಟಾಲಿವುಡ್ ನ ಯಂಗ್ ಟೈಗರ್ ಜ್ಜ್ಯೂ.NTR … ಇಬ್ಬರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿಗಳ ಬಳಗವಿದೆ.. ಅದ್ರಲ್ಲೂ ಜ್ಯೂ.NTR , RRR ಸಿನಿಮಾ ಕಾರಣದಿಂದ ಮೂಲಕ ಇಡೀ ಭಾರತೀಯ ಸಿನಿಮಾರಂಗದಲ್ಲಿ ತಮ್ಮ ಕ್ರೇಜ್ ಮತತಷ್ಟು ಹೆಚ್ಚಿಸಿಕೊಂಡಿದ್ದಾರೆ… ಡಿಪ್ಪಿಗೂ ದೊಡ್ಡ ಸ್ಟಾರ್ ಡಮ್ ಇದೆ… ಆದ್ರೆ ಇದೀಗ ದೀಪಿಕಾ ಪಡುಕೋಣೆ ಜ್ಯೂ.NTR ಬಗ್ಗೆ ಮಾತನಾಡಿರೋದು ಅಚ್ಚರಿಗೆ ಕಾರಣವಾಗಿದೆ.. ಹೌದು ಬಾಲಿವುಡ್ ಪದ್ಮಾವತಿಗೆ ಟಾಲಿವುಡ್ ತಾರಕ್ ಜೊತೆಗೆ ಸಿನಿಮಾ ಮಾಡೋ ಆಸೆಯಂತೆ…
ದೀಪಿಕಾ ಪಡುಕೋಣೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಕೆಲಸ ಮಾಡಲು ಬಯಸುವ ನಟರು ಮತ್ತು ನಿರ್ದೇಶಕರ ಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ನನಗೆ ಜ್ಯೂ. ಎನ್ ಟಿ ಆರ್ ಜೊತೆಗೆ ನಟಿಸಲು ಇಷ್ಟ ಎಂದಿದ್ದಾರೆ… ಅಷ್ಟೇ ಅಲ್ಲ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಯೂ ನಟನೆ ಮಾಡೋ ಆಸೆಯಂತೆ… ಅಂದ್ಹಾಗೆ ಇತ್ತೀಚೆಗೆ ಬಾಲಿವುಡ್ ನಟಿ ಮಣಿಯರಿಗೆ ಅದ್ಯಾಕೋ ನಮ್ಮ ಸೌತ್ ಸಿನಿಮಾ ಇಂಡಸ್ಟ್ರಿ , ಜೊತೆಗೆ ನಮ್ಮ ಸೌತ್ ನಟರ ಮೇಲೆ ಒಲವು ಹೆಚ್ಚಾದಂತೆ ಕಾಣುತ್ತಿದೆ… ಇತ್ತೀಗೆ ಆಲಿಯಾ ಭಟ್ ನಟ ಅಲ್ಲು ಅರ್ಜುನ್ ಜೊತೆಗೆ ನಟಿಸುವ ಆಸೆಯನ್ನ ಹೊರಹಾಕಿದ್ದರು… ಅಂದ್ಹಾಗೆ ಈಗಾಗಲೇ ಆಲಿಯಾ ಮೊದಲ ಸೌತ್ ಸಿನಿಮಾ ಆರ್ ಆರ್ ಆರ್ ನಲ್ಲಿ ಬಣ್ಣ ಹಚ್ಚಿದ್ದಾರೆ…
ಇನ್ನೂ ದೀಪಿಕಾ ಪಡುಕೋಣೆ ಸಹ ಸೌತ್ ಸ್ಟಾರ್ ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳಲಿರುವುದು ಗೊತ್ತೇ ಇದೆ… ಇದೀಗ ಡಿಪ್ಪಿಗೆ ಜ್ಯೂ. ಎನ್ ಟಿ ಆರ್ ಹಾಗೂ ಅಲ್ಲು ಜೊತೆಗೆ ಸಿನಿಮಾ ಮಾಡುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ…. ನಾನು ಎಲ್ಲರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಆದರೆ ನಾನು ಜೂನಿಯರ್ ಎನ್ಟಿಆರ್ ಮತ್ತು ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿಯೂ ನಾನು ಜೂನಿಯರ್ ಎನ್ಟಿಆರ್ ಅವರೊಂದಿಗೆ ನಟಿಸಲು ಇಷ್ಟಪಡುತ್ತೇನೆ. ಅವರ ವ್ಯಕ್ತಿತ್ವ ನನಗೆ ಇಷ್ಟವಾಯ್ತು ಎಂದು ಹಾಡಿ ಹೊಗಳಿದ್ದಾರೆ… ಅಷ್ಟೇ ಅಲ್ಲದೇ ರಾಜಮೌಳಿ ಅವರೊಂದಿಗೆ ಕೆಲಸ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ ದೀಪಿಕಾ…