ದಿವ್ಯಾಂಗ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ನಟಿ ಶ್ರೀಲೀಲಾ….
ಕನ್ನಡದ ‘ಕಿಸ್’ ಬ್ಯೂಟಿ ,,,,, ಟಾಲಿವುಡ್ , ಸ್ಯಾಂಡಲ್ ವುಡ್ ಎರಡರಲ್ಲೂ ಮಿಂಚುತ್ತಿರುವ ಯುವ ನಟಿ ಶ್ರೀಲೀಲಾ,,,, ಕೇವಲ , ಆಕ್ಟಿಂಗ್ ,,, ಬ್ಯೂಟಿಗಷ್ಟೇ ,,, ನಟಿಯರು ಸೀಮಿತವಲ್ಲ ಎನ್ನೋದನ್ನ ತೋರಿಸಿಕೊಟ್ಟಿದ್ದಾರೆ… ಕ್ಯೂಟ್ ಬೆಡಗಿ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ… ಇತ್ತೀಚೆಗೆ ಅವರ ಹಾಗೂ ನಟ ಧನ್ವೀರ್ ನಟನೆಯ ಬೈ ಟೂ ಲವ್ ಸಿನಿಮಾದ ಲವ್ ಟ್ರ್ಯಾಕ್ ರಿಲೀಸ್ ಆಗಿದ್ದು, ಸಾಂಗ್ ಈಗಾಗಲೇ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ…
ಆದ್ರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶ್ರೀಲೀಲಾ ಬಗ್ಗೆ ಒಂದು ಸುದ್ದಿ ಹರಿದಾಡ್ತಿದೆ,..ಅನೇನಂದ್ರೆ ಲೀಲಾ ಇಬ್ಬರು ದಿವ್ಯಾಂಗ ಮಕ್ಕಳನ್ನ ದತ್ತು ಪಡೆಯುತ್ತಿದ್ದಾರೆ ಎನ್ನುವುದು… ಹೌದು… ಯುವ ನಟಿ ಶ್ರೀಲೀಲಾ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಿ ಮಾದರಿಯಾಗಿದ್ದಾರೆ.
ಇಬ್ಬರು ಅನಾಥ ದಿವ್ಯಾಂಗ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಈಗ ನಟಿ ಶ್ರೀಲೀಲಾ ಅವರೇ ತೆಗೆದುಕೊಂಡಿದ್ದಾರೆ. ಈ ಮೂಲಕ ಇಬ್ಬರು ಮಕ್ಕಳ ಬಾಳಿಗೆ ಬೆಳಕಾಗಿ , ಇತರೇ ನಟ ನಟಿಯರಿಗೆ ಮಾದರಿಯಾಗಿದ್ದಾರೆ… ಇವರು ಶ್ರೀ ಮನೋವಿಕಾಸ ಕೇಂದ್ರದಿಂದ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.
ಆಶ್ರಮದಿಂದ ಇಬ್ಬರು ಮಕ್ಕಳನ್ನು ನಟಿ ದತ್ತು ಸ್ವೀಕಾರ ಮಾಡಿದ್ದಾರೆ. ಅದರಲ್ಲಿ ಗುರು ಎಂಬ ಮಗು ಕೇವಲ 8 ತಿಂಗಳ ಮಗು. ಶೋಭಿತಾ ಎನ್ನುವ ಹೆಣ್ಣು ಮಗುವನ್ನು ಕೂಡ ಅವರು ದತ್ತು ಪಡೆದುಕೊಂಡಿದ್ದಾರೆ. ಮಕ್ಕಳನ್ನು ದತ್ತು ಪಡೆದುಕೊಂಡ ಬಳಿಕ ನಟಿ ಶ್ರೀಲೀಲಾ ಅವರು ಭಾವುಕರಾಗಿದ್ದಾರೆ…
ಬಾಲಿವುಡ್ ನಲ್ಲಿ ಅನೇಕ ನಟಿಯರು ಅನಾಥ ಮಕ್ಕಳನ್ನ ದತ್ತು ಪಡೆದುಕೊಂಡಿರುವುದನ್ನ ನಾವು ಕಾಣಬಹುದು.. ಸುಷ್ಮಿತಾ ಸೇನ್, ರವೀನಾ ತಂಡನ್ ಇದಕ್ಕೆ ಎಕ್ಸಾಂಪಲ್… ಆದ್ರೆ ಕನ್ನಡದಲ್ಲಿ ನಟಿಯರು ಹೀಗೆ ಮಕ್ಕಳನ್ನು ದತ್ತು ಪಡೆದು ಬೆಳೆಸಿರುವುದು ವಿರಳಾತಿ ವಿರಳ.. ಶ್ರೀಲೀಲಾ ಅವರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ…