Sandalwood : ಕನ್ನಡದ ಹಿರಿಯ ನಟಿ ಭಾರ್ಗವಿ ಇನ್ನಿಲ್ಲ
ಕನ್ನಡದ ಹಿರಿಯ ನಟಿ ಭಾರ್ಗವಿ ಅವರು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅಪ್ಪು ಅಭಿನಯದ ರಾಜಕುಮಾರ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆದಿದ್ದ ಭಾರ್ಗವಿ ಅವರು ತಮ್ಮ 84 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ… ನಿನ್ನೆ ಸಂಜೆ ಅವರು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಕಲಾವಿದೆ ಭಾರ್ಗವಿ ನಾರಾಯಣ ಅವರು ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕೂಡಾ ಸಕ್ರಿಯರಾಗಿದ್ದು 600ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿದ್ದಾರೆ.
2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಭಾರ್ಗವಿ ಅವರು, ಭಾರ್ಗವಿಯವರು ರಂಗಭೂಮಿಯಲ್ಲಿ ‘ಮೇಕಪ್ ನಾಣಿ’ ಎಂದೇ ಹೆಸರಾಗಿದ್ದ ಬೆಳವಡಿ ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ಕು ಮಕ್ಕಳಿದ್ದಾರೆ.