ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಇನ್ನಿಲ್ಲ…
ಬಾಲಿವುಡ್ ನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಅಗಲಿ ಇನ್ನೂ ಸರಿಯಾಗಿ 15 ದಿನಗಳೂ ಕಳೆದಿಲ್ಲ ಅಷ್ಟ್ರಲ್ಲೇ ಸಂಗೀತ ಜಗತ್ತಿನ ಮತ್ತೋರ್ವ ದಿಗ್ಗಜರು ಇಂದು ಕೊನೆಯುಸಿರೆಳೆದಿದ್ದಾರೆ..
ಖ್ಯಾತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ಆಗಿದ್ದ ಬಪ್ಪಿ ಲಹಿರಿ ಅವರು ತಮ್ಮ 69ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ… ಲಹರಿ ಅವರು ಬಹಳ ದಿನಗಳಿಂದ ಅನೇಕ ಆರೋಗ್ಯದಿಂದ ಬಳಲುತ್ತಿದ್ದರು.. ಮುಂಬೈನ ಆಸ್ಪತ್ರೆಯಲ್ಲಿ ಅವರು ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.. ಸೋಮವಾರ ಡಿಸ್ಚಾರ್ಜ್ ಆಗಿದ್ದವರು ಮಂಗಳವಾರ ಮತ್ತೆ ಆರೋಗ್ಯ ಹದಗೆಟ್ಟು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ರು… ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ…
ಇವರ ಸಂಗೀತದ ಕ್ರೇಜೇ ವಿಭಿನ್ನ ,,,, ಭಾರತದಲ್ಲಿ ಡಿಸ್ಕೋ ಮ್ಯೂಸಿಕ್ ನ ಹೆಚ್ಚು ಜನಪ್ರಿಯತೆ ಗಳಿಸಿಕೊಟ್ಟವರಲ್ಲಿ ಒಬ್ಬರು. ಹಿಂದಿ ಸಂಗೀತ ಲೋಕದಲ್ಲಿ ಇವರು ದೊಡ್ಡ ಮಟ್ಟದಲ್ಲೇ ಹೆಸರು ಮಾಡಿದ್ದಾರೆ… ಕಡೆಯದಾಗ ‘ಭಾಗಿ 3’ಹಾಡು ಹಾಡಿದ್ದರು.. ಅಷ್ಟೇ ಅಲ್ಲದೇ ಕನ್ನಡ ಹಾಡುಗಳನ್ನೂ ಬಪ್ಪಿ ಲಹರಿ ಹಾಡಿದ್ದಾರೆ..
ಕನ್ನಡದಲ್ಲಿ ಆಫ್ರಿಕಾದಲ್ಲಿ ಶೀಲಾ , ಕೃಷ್ನ ನೀ ಬೇಗನೇ ಬಾರೋ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಹಾಡುಗಳನ್ನ ಕಂಪೋಸ್ ಮಾಡಿದ್ದಾರೆ..