ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಲೆಜೆಂಡರಿ ಬೆಂಗಾಲಿ ಗಾಯಕಿ ಸಂಧ್ಯಾ ಮುಖರ್ಜಿ ಇನ್ನಿಲ್ಲ
ಕೊಲ್ಕತ್ತಾ : ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಲೆಜೆಂಡರಿ ಬೆಂಗಾಲಿ ಗಾಯಕಿ ಸಂಧ್ಯಾ ಮುಖರ್ಜಿ ಮುಖೋಪಾಧ್ಯಾಯ ಅವರು ನಿನ್ನೆ ಸಂಜೆ ಹೃದಯಸ್ತಂಬನದಿಂದಾಗಿ ನಿಧನರಾಗಿದ್ದಾರೆ.
ಇತ್ತೀಚೆಗೆ ಸಂಧ್ಯಾ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು.. ನಂತರ ಪರೀಕ್ಷೆಗೆ ಒಳಪಡಿಸಿದಾಗ ಬಹುಅಂಗಾಂಗಳ ವೈಫಲ್ಯ , ಹೃದಯ ಸಂಬಂಧಿ ಕಾಯಿಲೆ ಸಮಸ್ಯೆ ಇರುವುದು ತಿಳಿದುಬಂದಿತ್ತು.. ಹೀಗಾಗಿ ಅಂದಿನಿಂದ ಇವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗ್ತಿತ್ತು… ಇದೀಗ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ..
90 ವರ್ಷ ವಯಸ್ಸಾಗಿದ್ದ ಇವರು 2022-23ರ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಅಲ್ಲದೇ ಇದು ನನಗೆ ಈಗ ಸಿಕ್ಕಿರುವುದು ಅಸಮಾಧಾನಕರ , ಕಿರಿಯ ಕಲಾವಿದರಿಗೆ ಹೆಚ್ಚು ಅರ್ಹವಾಗಿದೆ ನಮ್ಮಂತವರಿಗಲ್ಲ ಎಂದು ಪದ್ಮಶ್ರೀ ಗೌರವ ಬೇಡವೆಂದಿದ್ದರು.. ಅಂದ್ಹಾಗೆ ಇವರು ದೇಶದ ನಾಗರಿಕ ನೀಡುವ ಅತ್ಯುನ್ನತ ಗೌರವವನ್ನು ನಿರಾಕರಿಸಿದ ಪಶ್ಚಿಮ ಬಂಗಾಳದ ಎರಡನೇ ವ್ಯಕ್ತಿಯಾಗಿದ್ದಾರೆ.
ಇವರಿಗೆ ಪ್ರಧಾನಿ ನರೇಂದ್ರ ಮೋದಿ , ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ..