Bollywood – ಅಕ್ಷಯ್ “ಬಚ್ಚನ್ ಪಾಂಡೆ” ಟ್ರೇಲರ್ ರಿಲೀಸ್….
ಅಕ್ಷಯ್ ಕುಮಾರ್ ನಟನೆಯ ಬಹು ನಿರೀಕ್ಷಿತ ಬಚ್ಚನ್ ಪಾಂಡೆ ಟ್ರೇಲರ್ ಬಿಡುಗಡೆಯಾಗಿದೆ. ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಕೃತಿ ಸನೋನ್ ನಟನೆಯ ಬಚ್ಚನ್ ಪಾಂಡೆ ಯನ್ನ ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡಿದ್ದಾರೆ. 2014 ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಜಿಗರ್ತಾಂಡದ ರಿಮೇಕ್ ಆಗಿದ್ದು. ಬಚ್ಚನ್ ಪಾಂಡೆ ಮಾರ್ಚ್ 18 ರಂದು ತೆರೆಗೆ ಬರಲಿದೆ. Bachchhan Paandey Trailer: Akshay Kumar is in roaring form in this mass entertainer
ಬಚ್ಚನ್ ಪಾಂಡೆಯನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದು, ನಿಶ್ಚಯ್ ಕುಟ್ಟಂಡ ಮತ್ತು ನಿರ್ದೇಶಕ ಫರ್ಹಾದ್ ಸಾಮ್ಜಿ ಬರವಣಿಗೆ ಇದೆ. ಅಕ್ಷಯ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಕೃತಿ ಸನೋನ್ ಜೊತೆಗೆ, ಚಿತ್ರದಲ್ಲಿ ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್, ಅಭಿಮನ್ಯು ಸಿಂಗ್, ಸ್ನೇಹಲ್ ದಾಬ್ಬಿ ಮತ್ತು ಸಹರ್ಷ್ ಕುಮಾರ್ ಶುಕ್ಲಾ ನಟಿಸಿದ್ದಾರೆ. ಬಚ್ಚನ್ ಪಾಂಡೆ ಈ ಮೊದಲು ಡಿಸೆಂಬರ್ 25, 2021 ರಂದು ರಿಲೀಸ್ ಆಗಬೇಕಿತ್ತು. ಒಮಿಕ್ರಾನ್ ಕಾರಣದಿಂದಾಗಿ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿತ್ತು. ಈಗ ಮಾರ್ಚ್ 18, 2022 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.