Badava rascal | ಬಡವ ರಾಸ್ಕಲ್ ಗೆ ಟಾಲಿವುಡ್ ನಲ್ಲಿ ಸಿಕ್ಕ ರೇಟಿಂಗ್
ನಟ ರಾಕ್ಷಸ, ಡಾಲಿ ಧನುಂಜಯ ಅಭಿನಯ ಬಡವ ರಾಸ್ಕಲ್ ಸಿನಿಮಾ ಚಂದನವನದಲ್ಲಿ ಇಂಡಸ್ಟ್ರೀ ಹಿಟ್ ಆಗಿದೆ.
ಬಡವ ರಾಸ್ಕಲ್ ಗೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟು ಬ್ಲಾಕ್ ಬಸ್ಟರ್ ಮಾಡಿದ್ದಾರೆ. ಈ ಸಿನಿಮಾ ಮೂಲಕ ಡಾಲಿ ತಮ್ಮ ತಾಕತ್ತನ್ನ ನಿರೂಪಿಸಿಕೊಂಡಿದ್ದಾರೆ.
ಸಿನಿಮಾ ರಿಲೀಸ್ ಆದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಂಡಿದ್ದು ಅಲ್ಲದೇ, 50 : 50 ಸೀಟಿಂಗ್ ಇದ್ದಾಗಲೂ ಸಿನಿಮಾ ನೋಡಲು ಜನರು ಮುಗಿಬಿದ್ದರು.
ಹೌಸ್ ಫುಲ್ ಪ್ರದರ್ಶನಗಳು ಕಂಡವು. ಬಾಕ್ಸ್ ಆಫೀಸ್ ನಲ್ಲಿ ಬಡವ ರಾಸ್ಕಲ್ ಭರ್ಜರಿಯಾಗಿ ಕಮಾಯಿ ಮಾಡಿದ.
ಇದೇ ಜೋಷ್ ನಲ್ಲಿ ಈ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ.
ಕನ್ನಡದಲ್ಲಿ ಸೂಪರ್ ಹಿಟ್ ಆದ ಸಿನಿಮಾ ತೆಲುಗು ಪ್ರೇಕ್ಷಕರ ಮನ ಗೆಲ್ತಾ..? ಬಡವ ರಾಸ್ಕಲ್ ಗೆ ಟಾಲಿವುಡ್ ಮಂದಿ ಕೊಟ್ಟ ರೇಟಿಂಗ್ ಎಷ್ಟು..?
ಡಾಲಿ ತೆಲುಗು ಪ್ರೇಕ್ಷಕರಿಗೆ ಹೊಸಬರಲ್ಲ.. ಈ ಹಿಂದೆ ಹಲವು ಸಿನಿಮಾಗಳ ಮೂಲಕ ಆಂಧ್ರದಲ್ಲಿ ಪರಿಚಿತರಾಗಿದ್ದಾರೆ.
ಅದರಲ್ಲೂ ಪುಷ್ಪ ಸಿನಿಮಾದಲ್ಲಿನ ಜಾಲಿ ರೆಡ್ಡಿ ಪಾತ್ರ ಎಲ್ಲರ ಮನಸ್ಸಿನಲ್ಲಿದೆ. ಹೀಗಾಗಿ ಬಡವ ರಾಸ್ಕಲ್ ಸಿನಿಮಾಗೆ ಅಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಅಲ್ಲಿನ ಸಿನಿಮಾ ವಿಮರ್ಷಕರು ಕೂಡ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 5ಕ್ಕೆ ಮೂರುವರೆ ಅಂತ ಅಲ್ಲಿನ ಸಿನಿ ಪಂಡಿತರು ಮಾರ್ಕ್ಸ್ ಕೊಟ್ಟಿದ್ದಾರೆ.
Badava Rascal Movie Review & Ratings