KGF -2 ಅಭಿಯಾನ ಶುರು ಮಾಡಿದ ರಾಖಿ ಭಾಯ್ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ತಂಡಕ್ಕೆ ಸೆಡ್ಡು ಹೊಡೆದು ರಾಖಿ ಭಾಯ್ ಅಭಿಮಾನಿಗಳು ಪ್ರಚಾರದ ಅಖಾಡಕ್ಕೆ ಇಳಿಸಿದ್ದಾರೆ. ಏಪ್ರಿಲ್ 14ಕ್ಕೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೆ ಅಭಿಮಾನಿಗಳೇ ಅಭಿಯಾನ ಶುರುಮಾಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ‘KGF 2 50days to go’ ಅಭಿಯಾನವನ್ನು ಆರಂಭಿಸಿದ್ದಾರೆ.
ಹೌದು..! ಕೆಜಿಎಫ್ ಸಿನಿಮಾ ಯಶ್ ಅವರನ್ನ ಆಕಾಶದೆತ್ತರಕ್ಕೆ ಬೆಳೆಸಿದೆ. ಕನ್ನಡದ ಸಿನಿಮಾ ದುನಿಯಾಗೆ ಸೀಮಿತವಾಗಿದ್ದ ಯಶ್ ಅವರನ್ನ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದರು. ಅಲ್ಲಿಂದ ಯಶ್ ರಾಖಿ ಭಾಯ್ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಅಲ್ಲದೇ ಸಿನಿಮಾ ಸೀಕ್ವೆಲ್ ಗಾಗಿ ಸಿನಿಮಾ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಈ ಚಿತ್ರದ ಬಿಡುಗಡೆ ಮುಂದೂಡುತ್ತಲೇ ಬರಲಾಗಿದೆ. ಆದ್ರೆ ಈಗ ಏಪ್ರಿಲ್ 14ರಂದು ‘ಕೆಜಿಎಫ್ 2’ ರಿಲೀಸ್ ಆಗಲಿದೆ. ಆದ್ರೆ ಚಿತ್ರತಂಡ ಮಾತ್ರ ಇನ್ನೂ ಪ್ರಚಾರದ ಕೆಲಸಗಳನ್ನ ಶುರು ಮಾಡಿಲ್ಲ. ಕನಿಷ್ಟ ಪಕ್ಷ ಸಿನಿಮಾದಿಂದ ಒಂದೇ ಒಂದು ಪೋಸ್ಟರ್, ಗ್ಲಿಂಪ್ ರಿಲೀಸ್ ಮಾಡಿಲ್ಲ. ಹೀಗಾಗಿಯೇ ರಾಖಿ ಭಾಯ್ ಅಭಿಮಾನಿಗಳೇ ಅಭಿಯಾನ ಶುರುಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ‘KGF 2 50days to go’ ಅಭಿಯಾನವನ್ನು ಆರಂಭಿಸಿದ್ದಾರೆ. ಟ್ವಿಟರ್ನಲ್ಲಿ ‘ಕೆಜಿಎಫ್ 2’ 50 ದಿನಗಳ ಪೋಸ್ಟರ್ ಅಭಿಮಾನಿಗಳ ಖಾತೆಯಲ್ಲಿ ರಾರಾಜಿಸುತ್ತಿವೆ.
ಅಂದಹಾಗೆ ಯಶ್ ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. ಇನ್ನೇನಿದ್ದರೂ ಕೇವಲ ಪ್ರಚಾರ ಮಾತ್ರ ಬಾಕಿ ಉಳಿದಿದ್ದು, ಯಾವಾಗಿನಿಂದ ಪ್ರಚಾರ ಶೂರು ಮಾಡ್ತಾರೆ ಅನ್ನೋದು ಕಾದು ನೋಡಬೇಕು.
KGF 2 rocking-star-yash fans campaign