‘ಪೊನ್ನಿಯನ್ ಸೆಲ್ವನ್’…. ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದು… ಈ ಸಿನಿಮಾಗೆ ಭಾರತದ ಸ್ಟಾರ್ ನಿರ್ದೇಶಕರಾದ ಮಣಿರತ್ನಂ ಆಕ್ಷನ್ ಕಟ್ ಹೇಳ್ತಿರೋದು ಒಂದೆಡೆಯಾದ್ರೆ , ಸೌತ್ ಬಾಲಿವುಡಡ್ ನ ಸ್ಟಾರ್ ದಂಡೇ ಸಿನಿಮಾದಲ್ಲಿರುವುದು ಸಿನಿಮಾದ ಹೈಪ್ ಹೆಚ್ಚಿಸಿದೆ.
ತಮಿಳಿನ ಸ್ಟಾರ್ ನಟರಾದ ಚಿಯಾನ್ ವಿಕ್ರಮ್ , ಕಾರ್ತಿ , ಬಹುಭಾಷಾ ನಟಿ ತ್ರಿಶಾ , ಜಯಮ್ ರವಿ , ಬಾಲಿವುಡ್ ನ ಸ್ಟಾರ್ ನಟಿ ಐಶ್ವರ್ಯಾ ಹೀಗೆ ದೊಡಡ್ಡ ಸ್ಟಾರ್ ನಟರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ..
ಇದೀಗ ‘ಪೊನ್ನಿಯನ್ ಸೆಲ್ವನ್’ ಭಾಗ 1ರ ರಿಲೀಸ್ ಡೇಡ್ ಅನೌನ್ಸ್ ಆಗಿದೆ.. ಮದ್ರಾಸ್ ಟಾಕೀಸ್ ಜೊತೆಗೆ ಲೈಕಾ ಪ್ರೊಡಕ್ಷನ್ಸ್ ಅದ್ಧೂರಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದ ಹಂತದಲ್ಲಿರುವ ಚಿತ್ರತಂಡ, ಮೊದಲ ಭಾಗದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
‘ಪೊನ್ನಿಯನ್ ಸೆಲ್ವನ್’ ಭಾಗ 1 ಈ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.
ಇದಲ್ಲದೇ ಮ್ಯೂವಿ ಮೇಕರ್ಸ್ ಐಶ್ವರ್ಯಾ ರೈ, ತ್ರಿಶಾ, ವಿಕ್ರಮ್, ಜಯಂ ರವಿ ಮತ್ತು ಕಾರ್ತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ಗಳಲ್ಲಿ ಐಶ್ವರ್ಯ ರೈ ಮತ್ತು ತ್ರಿಶಾ ರಾಜಕುಮಾರಿಯರಾಗಿ ಕಾಣಿಸಿಕೊಂಡರೆ, ವಿಕ್ರಮ್ ಮತ್ತು ಜಯಂ ರವಿ ಯುದ್ಧ ವೀರರಾಗಿ ಕಾಣಿಸಿಕೊಂಡಿದ್ದಾರೆ. ಕಾರ್ತಿ ಡಿಫರೆಂಟ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಪೋಸ್ಟರ್ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಸಿನಿಮಾ ತಮಿಳು, ಕನ್ನಡ , ತೆಲುಗು, ಹಿಂದಿ, ಮಲಯಾಳಂನಲ್ಲಿ ರಿಲೀಸ್ ಆಗ್ತಿದೆ.. ಈ ಸಿನಿಮಾಗೆ ಎ ಆರ್ ರೆಹಮಾನ್ ಸಂಗೀತವಿದೆ.