2023ರ ಈದ್ ಗೆ ‘ಟೈಗರ್ 3’ ರಿಲೀಸ್..!!
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ ಹಾಗೂ ಕತ್ರೀನಾ ಕಕೈಫ್ ನಟನೆಯ ‘ಏಕ್ ಥಾ ಟೈಗರ್’ ಹಲವು ವರ್ಷಗಳ ಹಿಂದೆ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡಿತ್ತು… ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.. ನಂತರ ಬಂದಿದ್ದು ಅದರದ್ದೇ ಸೀಕ್ವೆಲ್ ‘ಟೈಗರ್ ಜಿಂದಾ ಹೇ’. ಈ ಸಿನಿಮಾ ಕೂಡ ಏನ್ ಕಡಡಿಮೆ ಸೌಂಡ್ ಮಾಡಿಲ್ಲ.. ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತು.. ಸೂಪರ್ ಹಿಟ್ ಆಯ್ತು..
ಇದೀಗ ಇದೇ ಸಿನಿಮಾದ ಮುಂದುವರೆದ ಭಾಗ ಟಟೈಗರ್ 3 ಶೂಟಿಂಗ್ ಭರದಿಮದ ಸಾಗುತ್ತಿದೆ.. ಚಿತ್ರತಂಡ ಇತ್ತೀಚೆಗಷ್ಟೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು , ಸಿನಿಮಾ ಅಭಿಮಾನಿಗಳ ಕಾತರತೆ ಹೆಚ್ಚಿಸಿದೆ..
ಅಂದ್ಹಾಗೆ ಈ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.. ಈ ಸಿನಿಮಾ ಮುಂದಿನ ವರ್ಷ ಅಂದ್ರೆ 2023 ರಲ್ಲಿ ಈದ್ ಪ್ರಯುಕ್ತ ರಿಲೀಸ್ ಆಗಲಿದೆ.. ಏಪ್ರಿಲ್ 21, 2023 ರಂದು ಈದ್ ಹಬ್ಬದ ಪ್ರಯುಕ್ತ ಟೈಗರ್ 3 ಸಿನಿಮಾ ರಿಲೀಸ್ ಆಗಲಿದೆ.
ಟರ್ಗಳಿಗೆ ಲಗ್ಗೆ ಇಡಲಿದೆ. ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಈ ಬಗ್ಗೆ ನಟ ಸಲ್ಮಾನ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿರುವ ಸಲ್ಮಾನ್ ಖಾನ್ ಈದ್ ಪ್ರಯುಕ್ತ , ಹಿಂದಿ , ತಮಿಳು , ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗುವುದಾಗಿ ತಿಳಿಸಿದ್ದಾರೆ..
ಈ ಸಿನಿಮಾದಲ್ಲಿ ಮತ್ತೊಂದು ದೊಡಡ್ಡ ವಿಶೇಷತೆ ಅಂದ್ರೆ ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು.. ಅಷ್ಟೇ ಅಲ್ಲ 4 ವರ್ಷಗಳ ನಂತರ ರೆಡಿಯಾಗ್ತಿರುವ ಶಾರುಖ್ ಖಾನ್ ರ ಪಠಾನ್ ಸಿನಿಮಾದಲ್ಲಿ ಸಲ್ಲು ಕಾಣಿಸಿಕೊಳ್ತಿದ್ದಾರೆ..