ಆಲಿಯಾ ಭಟ್ ಇನ್ಮುಂದೆ ಬಾಲಿವುಡ್ ನಲ್ಲಿ ಕಾಣಿಸುವುದು ಡೌಟ್..??
ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಡಿಕೊಂಡು ಬೋಲ್ಡ್ ಪಾತ್ರದಲ್ಲಿ ನಟಿಸಿರುವ ಗಂಗೂಬಾಯಿ ಕಾಥೇಯವಾಡಿ ಸಿನಿಮಾ ಥೀಯೇಟರ್ ಗಳಲ್ಲಿ ಅಬ್ಬರಿಸುತ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಈ ನಡುವೆಯೇ ಆಲಿಯಾ ಹಾಲಿವುಡ್ ಗೆ ಹಾರಿದ್ಧಾರೆ..
ಹೌದು,,, ಪ್ರಸ್ತುತ ಬಾಲಿವುಡ್ ನಲ್ಲಿ ಸ್ಟಾರ್ ನಟಿ ಆಗಿರುವ ಆಲಿಯಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದರ ನಡುವೆಯೇ ನಟಿ ಪ್ರಿಯಾಂಕಾ ಚೋಪ್ರಾ , ಐಶ್ವರ್ಯಾ ಅವರ ತರಹ ಹಾಲಿವುಡ್ ನಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ ಆಲಿಯಾ..
ಅಂದ್ಹಾಗೆ ಆಲಿಯಾ RRR ಚಿತ್ರದ ಮೂಲಕ ಸೌತ್ ಚಿತ್ರರಂಗಕ್ಕೂ ಕೂಡ ಎಂಟ್ರಿ ಕೊಡ್ತಿದ್ದಾರೆ. ಈ ಸಿನಿಮಾದ ಸೆನ್ಷೇಷನ್ ಕ್ರೇಜ್ ಭಾರತಾದ್ಯಂತ ಎಷ್ಟರ ಮಟ್ಟಿಗೆ ಇದೆ ಎನ್ನೋದು ಹೇಳೋ ಅವಶ್ಯಕತೆಯಿಲ್ಲ..
ಈ ನಡುವೆ ಹಾಲಿವುಡ್ ಗೆ ಆಲಿಯಾ ಹಾರಲಿದ್ದಾರೆ ಅನ್ನೋ ವದಂತಿಗಳು ಹರಿದಾಡಿದ್ದವು.. ಇದೀಗ ಆ ವದಂತಿ ನಿಜವಾಗಿದ್ದು ನಿಜಕ್ಕೂ ಆಲಿಯಾ ಹಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
NETFLIX ಮಾಡುತ್ತಿರುವ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಬಾಲಿವುಡ್ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಈ ಚಿತ್ರದಲ್ಲಿ ಆಲಿಯಾ ವಂಡರ್ ವುಮನ್ ಸಿನಿಮಾ ಖ್ಯಾತಿಯ ಹಾಲಿವುಡ್ ನಟಿ ಗಾಲ್ ಗಡೋಟ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ಧಾರೆ.
ಈ ಸಿನಿಮಾಗೆ ‘ಹಾರ್ಟ್ ಆಫ್ ಸ್ಟೋನ್’ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾವನ್ನ ಅಂತಾರಾಷ್ಟ್ರೀಯ ಸ್ಪೈ ಥ್ರಿಲ್ಲರ್ ಎಂದು ಹೇಳಲಾಗಿದೆ. ಚಿತ್ರಕ್ಕೆ ಟಾಮ್ ಹಾರ್ಪರ್ ಆಕ್ಷನ್ ಕಟ್ ಹೇಳುತ್ತಿದ್ಧಾರೆ.
ಹಾರ್ಟ್ ಆಫ್ ಸ್ಟೋನ್ ಚಿತ್ರೀಕರಣದ ಕೆಲವು ಗ್ಲಿಂಪ್ಸ್ಗಳನ್ನು ನಟಿ ಗಾಲ್ ಗಡೋಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ತನ್ನ ಪಾತ್ರವನ್ನು ರಾಚೆಲ್ ಸ್ಟೋನ್ ಎಂದು ಪರಿಚಯಿಸಿ, ಚಿತ್ರದಲ್ಲಿನ ಅವರ ಲುಕ್ ಫೋಟೋ ಒಂದನ್ನ ಸಹ ಹಂಚಿಕೊಂಡಿದ್ದಾರೆ.