ಮಾರ್ಚ್ 10 ಅಂದ್ರೆ ನಿನ್ನೆ 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸಸವ ವರ್ರಂಜಿತವಾಗಿ ಮುಕ್ತಾಯಗೊಂಡಿದೆ. ಈ ವೇಳೆ ಒಟ್ಟು 27 ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕನ್ನಡ ಸಿನಿಮಾ ವಿಭಾಗದಲ್ಲಿ ‘ಪಿಂಕಿ ಎಲ್ಲಿ’ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಒಲಿದು ಬಂದಿದೆ. 2ನೇ ಅತ್ಯುತ್ತಮ ಕನ್ನಡ ಸಿನಿಮಾವಾಗಿ ‘ ದಾರಿ ಯಾವುದಯ್ಯ ವೈಕುಂಠಕ್ಕೆ’ ಪ್ರಶಸ್ತಿಗೆ ಭಾಜನವಾಗಿದೆ. 3ನೇ ಸತ್ಯುತ್ತಮ ಸಿನಿಮಾವಾಗಿ ‘ಓ ನನ್ನ ಚೇತನ’ ಆಯ್ಕೆಯಾಗಿದ್ದು , ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಮತ್ತು ನಿರ್ದೇಶಕರನ್ನು ಗೌರವಿಸಲಾಯಿತು. ಅಷ್ಟೇ ಅಲ್ದೇ ಅಮರ್ ಗೌಡ ನಿರ್ದೇಶನದ ‘ಮಸಣದ ಹೂವು’ ಕನ್ನಡದ ಚಿತ್ರಜೂರಿ ಪ್ರಶಸ್ತಿಗೆ ಭಾಜನವಾಗಿದೆ.
ಇತ್ತ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾವಾಗಿ ‘ದೊಡ್ಡಹಟ್ಟಿ ಬೋರೇಗೌಡ’ ಪ್ರಥಮ ಸ್ಥಾನ ಪಡೆದುಕೊಂಡಿದೆ.
2ನೇ ಅತ್ಯುತ್ತಮ ಚಿತ್ರ ದಂಡಿ. ಈ ಚಿತ್ರವನ್ನು ವಿಶಾಲ್ ರಾಜ್ ನಿರ್ದೇಶನ ಮಾಡಿದ್ದಾರೆ. 3ನೇ ಅತ್ಯುತ್ತಮ ಚಿತ್ರ ‘ದೇವುಡ ಕಾಡ್’. ಕನ್ನಡ ಸಿನಿಮಾ ಸ್ಪರ್ಧೆ ಜೂರಿ ವಿಭಾಗದಲ್ಲಿ ಕೇಕ್ ಮತ್ತು ದಿಯಾ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕಿದೆ.
2021ನೇ ಸಾಲಿನ ಕನ್ನಡ ಪಾಪ್ಯೂಲರ್ ಎಂಟರ್ ಟೇನ್ಮೆಂಟ್ ವಿಭಾಗದಲ್ಲಿ – ಮೊದಲ ಪ್ರಶಸ್ತಿಯನ್ನ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ‘ಯುವರತ್ನ’ ಸಿನಿಮಾಗೆ ನೀಡಲಾಗಿದೆ. 2ನೇ ಅತ್ಯುತ್ತಮ ಜನಪ್ರಿಯ ಚಿತ್ರ ರಾಬರ್ಟ್. 3ನೇ ಅತ್ಯುತ್ತಮ ಜನಪ್ರಿಯ ಚಿತ್ರ ಕೋಟಿಗೊಬ್ಬ 3 , ಈ ವಿಭಾಗದಲ್ಲಿ ಜ್ಯೂರಿ ಪ್ರಶಸ್ತಿ ಪೊಗರು ಸಿನಿಮಾಗೆ ಸಿಕ್ಕಿದೆ.
ಶಿವಾಜಿ ಸೂರತ್ಕಲ್ 2ನೇ ಸತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಮೂರನೇ ಅತ್ಯುತ್ತಮ ಚಿತ್ರ ಡಾರ್ಲಿಂಗ್ ಕೃಷ್ನ ನಟಿಸಿ ನಿರ್ದೇಶಿಸಿರುವ ಲವ್ ಮಾಕ್ ಟೈಲ್ ಸಿನಿಮಾವಾಗಿದೆ.
ಪ್ರಶಸ್ತಿ ಪಡೆದ ಸಿನಿಮಾಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.
ಏಳು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ 13ನೇ ಅಂತಾರಾಷ್ಟ್ರೀಯ ನಿನ್ನೆ ಅಂತ್ಯಗೊಂಡಿದ್ದು , ಹಲವು ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ಪಡೆದುಕೊಂಡಿವೆ.