ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಎದುರಾಗಿದೆ. ಈಗಾಗಲೇ ಚಿತ್ರದ ಟ್ರೇಡ್ ಮಾರ್ಕ್ ಹಾಡು ಬಿಡುಗಡೆಯಾಗಿದ್ದು ಸೂಪರ್ ಹಿಟ್ ಆಗಿದೆ. ಈಗ ಚಿತ್ರದ ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ.
ಸಲಾಂ ಸೋಲ್ಜರ್ ದೇಶಕ್ಕೆ ನೀನೆ ಪವರ್ ಎನ್ನುವ ಹಾಡು ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ನಿರ್ದೇಶನದ ಜೊತೆಗೆ ಚಿತ್ರದ ಹಾಡುಗಳಿಗೆ ಚೇತನ್ ಕುಮಾರ್. ಸಾಹಿತ್ಯ ಬರೆದಿದ್ದಾರೆ. ಸಂಜಿತ್ ಹೆಗಡೆ ಮತ್ತು ಚರಣ್ ರಾಜ್ ಕಂಠಸಿರಿಯಲ್ಲಿ ಗೀತೆ ಮೂಡಿಬಂದಿದೆ. ಸೈನಿಕರ ಶೌರ್ಯ ಸಾಹಸ ದೇಶಭಕ್ತಿಯನ್ನ ಹೇಳುವ ಹಾಡು ಅದ್ಭುತವಾಗಿ ಮೂಡಿಬಂದಿದೆ. ಸಾಂಗ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಇದು. ಅಲ್ಲದೇ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ. ‘ರಾಜಕುಮಾರ’ ಬಳಿಕ ನಟಿ ಪ್ರಿಯಾ ಆನಂದ್ ಅವರು ಈ ಚಿತ್ರದಲ್ಲಿ ಎರಡನೇ ಬಾರಿಗೆ ಪುನೀತ್ಗೆ ಜೋಡಿ ಆಗಿದ್ದಾರೆ.