ಉತ್ತರ ಕೊಟ್ರೂ… ಪ್ರಶ್ನೆ ಇಟ್ಟು ಅಭಿಮಾನಿಗಳ ತಲೆಗೆ ಹುಳ ಬಿಟ್ಟರು ಉಪ್ಪಿ
ಉಪೇಂದ್ರ ನಿರ್ದೇಶನದ ಚಿತ್ರ ಅದ್ರೆ ಖಂಡಿತವಾಗಿ ಅಲ್ಲಿ ಒಂದು ಕುತೂಹಲ ಇದ್ದೇ ಇರುತ್ತೇ. ಚಿತ್ರದ ಶಿರ್ಷಿಕೆಯಿಂದ ಹಿಡಿದು ಸಿನಿಮಾ ಕಟೌಟ್ ವರೆಗೂ ಅಲ್ಲಿ ಕ್ರಿಯೆಟಿವಿಟಿ ಎದ್ದು ಕಾಣುತ್ತೆ. ಹಲವು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸುತ್ತಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಉಪೇಂದ್ರ ಡೈರಕ್ಷನ್ ಕ್ಯಾಪ್ ತೊಡುತ್ತಿದ್ದಾರೆ ಅಂದಾಗಲೇ ಚಿತ್ರದ ಕುರಿತ ಕುತೂಹಲ ಗರಿಗೆದರಿತ್ತು ಅಂತಯೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಕೊಂಬು ಇರುವ ಕುದುರೆ ಏರಿ ಕುಳಿತಿರುವ ಚಿತ್ರ ಬಿಡುಗಡೆಯಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಬಹುದು ಎಂದು ಸೂಚಿಸಿಯತ್ತು ಚಿತ್ರದ ಮೇಲಿರುವ ಹಲವು ಭಾಷೆಗಳ ಕ್ಯಾಪ್ಶನ್ ಸಾಕ್ಷಿ…
ಉಪ್ಪಿ 2 ಚಿತ್ರದ ಬಳಿಕ ಗ್ಯಾಪ್ ತೆಗೆದುಕೊಂಡಿದ್ದ ಉಪ್ಪಿ ಮತ್ತೆ ಕಂಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಹರ್ಷ ತಂದಿದೆ. ಉಪ್ಪಿ ಆದಷ್ಟು ಬೇಗ ಡೈರೆಕ್ಟರ್ ಕ್ಯಾಪ್ ಧರಿಸಲಿ ಎಂಬುದು ಎಲ್ಲ ಅಭಿಮಾನಿಗಳ ಆಸೆ ಆಗಿತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಚಿತ್ರವನ್ನ ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿ ಕೂಡ ಉಪೇಂದ್ರ ಬಣ್ಣ ಹಚ್ಚುತ್ತಿದ್ದಾರೆ.
ಪೋಸ್ಟರ್ ಜೊತೆ ಉಪೇಂದ್ರ ಬರೆದುಕೊಂಡಿರುವ ಸಾಲುಗಳು ಕೂಡ ಗಮನ ಸೆಳೆಯುತ್ತಿವೆ. ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.