ಸೌತ್ ಸಿನಿಮಾ ಇಂಡಸ್ಟ್ರಿಯ ಪವರ್ ಕೇವಲ ಬಾಲಿವುಡ್ , ಇಂಡಿಯಾಗಷ್ಟೇ ಅಲ್ದೇ ವಿಶ್ವಕ್ಕೆ ತೋರಿಸಿಕೊಟ್ಟಿದ್ದ ಸಿನಿಮಾ ಜಕ್ಕಣ್ಣ ಸಾರಥ್ಯ ವಹಿಸಿ ಡಾರ್ಲಿಂಗ್ ಪ್ರಭಾಸ್ ನಟಿಸಿದ್ದ ಬಾಹುಉಬಲಿ ಸಿನಿಮಾ…. ಬಾಹುಬಲಿ ಎರೆಡೂ ಸರಣಿಗಳು ನ, ಮುಂದೆ ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಕಡೆಗೆ ಫೋಕಸ್ ಮಾಡುವ ಧೈರ್ಯ ಕೊಟ್ಟಿತ್ತು.. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್ ಬಿಗ್ ಬಜೆಟ್ ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ.. ಅವರ ಬಹುನಿರೀಕ್ಷಿತ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ..
ಈ ನಡುವೆ ಬಾಹುಬಲಿ 3 ಬಗ್ಗೆ ಪ್ರಶ್ನೆಗಳು ಮೂಡಿವೆ.. ಈ ಬಗ್ಗೆ ಪ್ರಭಾಸ್ ಅವರು ಮಾತನಾಡಿದ್ದಾರೆ.. ಸಂಸದರ್ಶನ ಒಂದರಲ್ಲಿ ಬಾಹುಬಲಿ ಭಾಗ 3 ಮಾಡುವ ಯೋಜನೆ ಇದೆಯ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಭಾಸ್ ರಾಜಮೌಳಿ ಬಯಸಿದರೆ ಮಾತ್ರ ಬಾಹುಬಲಿ 3 ಸಾಧ್ಯವಾಗುತ್ತೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ಅಲ್ಲದೇ ಬಾಹುಬಲಿ 3 ಆಗಬೇಕಾದರೆ, ಅದು ಖಂಡಿತವಾಗಿಯೂ ಸಮಯ ತೆಗೆದುಕೊಳ್ಳುತ್ತದೆ. ಅದು ರಾಜಮೌಳಿ ಅವರ ಕೈಯಲ್ಲಿದೆ ಎಂದು ಹೇಳುವ ಮೂಲಕ ಬಾಹುಬಲಿ 3 ರಾಜಮೌಳಿ ಅವರು ಮನಸ್ಸು ಮಾಡಿದರೆ ಖಂಡಿತ ಬರುತ್ತದೆ ಎಂಬ ಸುಳಿವು ಕೊಟ್ಟಿದ್ದಾರೆ.. ಇದೇ ವೇಳೆ ಬಾಹುಬಲಿ 3 ಬರುತ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ ಆ ಸಿನಿಮಾ ನನ್ನ ಹೃದಯಕ್ಕೆತುಂಬಾ ಹತ್ತಿರವಾದ ಸಿನಿಮಾ.. ನನ್ನ ವೃತ್ತಿಜೀವನದಲ್ಲಿ ಆ ಸಿನಿಮಾ ಬೀರಿದ ಪ್ರಭಾವವನ್ನು ಎಂದಿಗೂ ಬೇರೆ ಸಿನಿಮಾ ಜೊತೆ ಹೊಂದಿಸಲು ಸಾಧ್ಯವಿಲ್ಲ. ಬಾಹಹುಬಲಿ 3 ಬರುತ್ತೋ ಇಲ್ವೋ ಗೊತ್ತಿಲ್ಲ.. ಅದನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ. ಅದು ರಾಜಮೌಳಿ ಅವರು ಬಯಸಿದರೆ ಮಾತ್ರ ಆಗುತ್ತೆ ಎಂದಿದ್ದಾರೆ..
ಮತ್ತೊಂದೆಡೆ ಬಾಹುಬಲಿ 3 ಬರಬೇಕೆಂಬುದೇ ಅಭಿಮಾನಿಗಳ ಆಶಯವೂ ಆಗಿದೆ.. ಬಾಹುಬಲಿಯಲ್ಲಿ ಪ್ರಬಾಸ್ ಬೀರಿರುವ ಚಾಪು ಮುಂದೆ ಅವರೆಂತಹ ಬಿಗ್ ಬಜೆಟ್ ಸಿನಿಮಾಗಳನ್ನ ಮಾಡಿದ್ರೂ ಮೀರಿಸಲು ಸಾಧ್ಯವಾಗುತ್ತಿಲ್ಲ.. ರಾಧಧೆ ಶ್ಯಾಮ್ ನಲ್ಲಿ ಒಂದೇ ಒಂದು ಫೈಟ್ ಸೀನ್ ಸಹ ಇಲ್ಲ.. ಇದು ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ.. ಈ ಹಿಂದೆ ರಿಲೀಸ್ ಆಗಿದ್ದ ಸಾಹೋ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಮಾಡಿತಾದ್ರೂ ಅಷ್ಟು ಒಳ್ಳೆ ವಿಮರ್ಷೆ ಸಿಗಲಿಲ್ಲ.. ಮುಂದೆ ಪ್ರಭಾಸ್ ಅವರ ಆದಿಪುರುಷ್ , ಸಲಾರ್ , ಸ್ಪಿರಿಟ್ ನಂತಹ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗಬೇಕಿವೆ..