ಹೊಸ ದಾಖಲೆ ಬರೆದ ಪುನೀತ್ ರಾಜ್ ಕುಮಾರ್ James…
ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳು ಮಾರ್ಚ್ 17 ರಿಂದ ಜಾತ್ರೆ ಶುರುಮಾಡಲಿದ್ದಾರೆ. ಅಪ್ಪು ಹುಟ್ಟುಹಬ್ಬ ಒಂದೆಡೆಯಾದ್ರೆ , ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ. ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ Puneeth Rajkumar ಅವರ James ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..
ಇದೀಗ ಜೇಮ್ಸ್ ಸಿನಿಮಾ ರಿಲೀಸ್ ಗೂ ಮುನ್ನವೇ ಹೊಸ ದಾಖಲೆ ಮಾಡಿದೆ.. ಒಂದೇ ಸಿನಿಮಾ ಮಂದಿರದಲ್ಲೇ 5000 ಟಿಕೆಟ್ ಸೋಲ್ಡ್ ಔಟ್ ಆಗಿದೆ..
ಹೌದು.. ಈಗಾಗಲೇ ಜೇಮ್ಸ್ ಚಿತ್ರ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಸಾವಿರಾರು ಮಂದಿ ಚಿತ್ರವನ್ನು ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ರಾಜ್ಕುಮಾರ್ ನಿವಾಸದ ಬಳಿಯ ಕಾವೇರಿ ಸಿನಿಮಾಸ್ ಚಿತ್ರಮಂದಿರದಲ್ಲಿ ಬೆಳಗ್ಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ 5 ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದೆ.. ಇನ್ನೂವರೆಗೂ ಜನ ಮುಗಿಬಿದ್ದು ಟಿಕೆಟ್ ಖರೀದಿಗೆ ಸರ್ಕಸ್ ಮಾಡ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ವಿಶ್ವಾದ್ಯಂತ ಸುಮಾರು 15 ಕ್ಕೂ ಅಧಿಕ ದೇಶಗಳಲ್ಲಿ 4000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದೆ..