ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ ನಟ , ನಿರ್ದೇಶಕ ಪ್ರಕಾಶ್ ಬೆಳವಾಡಿ
ಸಾಕಷ್ಟು ವಿವಾದಗಳ ನಂತರ ಇಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆಗಿದೆ.. ಸಿನಿಮಾದಲ್ಲಿ ದಶಕಗಳ ಹಿಂದೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತೋರಿಸಲಾಗಿದೆ.
ಕೆಲವರು ಈ ಸಿನಿಮಾವನ್ನ ‘ಪ್ರೊಪಾಗಾಂಡಾ’ ಸಿನಿಮಾ ಎಂದು ಕರೆದಿದ್ದಾರೆ. ಸಿನಿಮಾ ಬಗ್ಗೆ ಅನೇಕಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಇದೇ ಸಿನಿಮಾದ ಚರ್ಚೆ ಜೋರಾಗಿದೆ.
ಈ ನಡುವೆ ಕನ್ನಡ ನಟ , ನಿರ್ದೇಶಕ , ಮಾಜಿ ಪತ್ರಕರ್ತರಾದ ಪ್ರಕಾಶ್ ಬೆಳವಾಡಿ ಅವರು ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ್ದಾರೆ.
ವಿಡಿಯೋ ಒಂದನ್ನ ಹಂಚಿಕೊಂಡಿರುವ ಪ್ರಕಾಶ್ ಬೆಳವಾಡಿಯವರು , ‘‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ನಟಿಸಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ವಿವೇಕ್ ಅಗ್ನಿ ಹೋತ್ರಿ ನನಗೆ ಈ ಸಿನಿಮಾದ ಚಿತ್ರಕತೆಯನ್ನು ಕಳಿಸಿದಾಗ ನನಗೆ ಗಾಬರಿಯಾಯಿತು, ಆ ವರೆಗೆ ನನಗೆ, ಜಮ್ಮು ಮತ್ತು ಕಾಶ್ಮೀರದಿಂದ ಕಶ್ಮೀರಿ ಪಂಡಿತರನ್ನು ಹೊರಹಾಕಿದ ಆ ಕ್ರೂರ ಘಟನೆಯ ಬಗ್ಗೆ ಇಷ್ಟೊಂದು ಮಾಹಿತಿಯೇ ಇರಲಿಲ್ಲ. ಆ ಚಿತ್ರಕತೆ ಓದಿ, ಮಾಹಿತಿ ಪಡೆದುಕೊಂಡ ಬಳಿಕ ನನಗೆ ಅಪರಾಧಿ ಭಾವ ಕಾಡಿತು. ನಾನು ಆ ಸಮಯದಲ್ಲಿ ಪತ್ರಕರ್ತನಾಗಿದ್ದೆ ಆದರೆ ನನಗೆ ಆ ಬಗ್ಗೆ ಮಾಹಿತಿ ಇರಲಿಲ್ಲ, ನಾನು ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನೂ ಮಾಡಲಾಗಲಿಲ್ಲ. ಹಾಗಾಗಿ ನಾನು ಕಶ್ಮೀರಿ ಪಂಡಿತರ ಕ್ಷಮೆ ಕೇಳುತ್ತೇನೆ. ಏಕೆಂದರೆ ಈ ಕ್ರೂರ ಘಟನೆ ಬಗ್ಗೆ ಮಾತನಾಡದ, ಮೌನವಾಗಿರುವ ಗುಂಪಿನ ಭಾಗವಾಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಅಲ್ಲದೇ “ನಾನು ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದ ಹೇಳುತ್ತೇನೆ. ನಾನು ಅವರಿಗೆ ಆಭಾರಿಯಾಗಿರುತ್ತೇನೆ. ಅವರು 1990 ರಲ್ಲಿ ನಡೆದ ಈ ಕ್ರೂರ ಘಟನೆಯ ಬಗ್ಗೆ ಸಂಶೋಧನೆ ನಡೆಸಿ, ಧೈರ್ಯದಿಂದ ಆ ಕತೆಯನ್ನು ಇಂದು ಜಗತ್ತಿಗೆ ತೋರಿಸುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿ ಎಂದು ಎಲ್ಲ ಭಾರತೀಯರಲ್ಲಿ ಮನವಿ ಮಾಡುತ್ತೇನೆ. ಭಾರತೀಯರಾಗಿ ನಮ್ಮದೇ ರಾಜ್ಯದಲ್ಲಿ ನಡೆದ ಈ ಘಟನೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ನ್ಯಾಯದ ಹಕ್ಕು (ರೈಟ್ ಟು ಜಸ್ಟಿಸ್) ಕಶ್ಮೀರಿ ಪಂಡಿತರಿಗೆ ದೊರಕಬೇಕು” ಎಂದಿದ್ದಾರೆ.. ವಿವೇಕ್ ಅಗ್ನಿಹೋತ್ರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ.