ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ , ಕ್ರೇಜ್ ಕ್ರಿಯೇಟ್ ಮಾಡಿದ್ದ , ಬಾಹುಬಲಿ ಪ್ರಭಾಸ್ – ಪೂಜಾ ಹೆಗ್ಡೆ ಅಭಿನಯದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ವಿಶ್ವಾದ್ಯಂತ ಮಾರ್ಚ್ 11 ರಂದು ರಿಲೀಸ್ ಆಗಿದೆ..
ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿತ್ತಾದರೂ,,, ಅಂದುಕೊಂಡಂತ ಪ್ರತಿಕ್ರಿಯೆ ಈ ಸಿನಿಮಾಗೆ ಸಿಕ್ಕಿಲ್ಲ… ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ,.. ಅಂದ್ಹಾಗೆ ಮಾಸ್ ಹೀರೋ ಆಗಿ ಗುರುತಿಸಿಕೊಂಡಿರುವ ಡಾರ್ಲಿಂಗ್ ಪ್ರಭಾಸ್ ಅವರು ಕಂಪ್ಲೀಟ್ ಲವರ್ ಬಾಯ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಒಂದು ಪೈಟ್ ಸೀನ್ ಸಿನಿಮಾದಲ್ಲಿ ಇಲ್ಲದೇ ಇರೋದು ಮೈನಸ್ ಪಾಯಿಂಟ್ ಎಂದೇ ಅಭಿಪ್ರಾಯಗಳು ವ್ಯಕ್ತವಾಗ್ತಿವೆ..
ಇದೆಲ್ಲದರ ನಡುವೆ ಸಿನಿಮಾಗೆ ದೊಡ್ಡ ಹೊಡೆತ ಬಿದ್ದಿರುವುದು ಆಂಧ್ರದಲ್ಲಿ.. ಆಂಧ್ರ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದಲೂ ಚಿತ್ರರಂಗ ಹಾಗೂ ಸರ್ಕಾರದ ನಡುವೆ ಚಿತ್ರಮಂದಿರಗಳ ಟಿಕೆಟ್ ವಿಚಾರವಾಗಿ ತಿಕ್ಕಾಟ ನಡೆಯುತ್ತಲೇ ಇತ್ತು. ಆದರೆ ಚಿರಂಜೀವಿ ಮಧ್ಯ ಪ್ರವೇಶದಿಂದ ಸಮಸ್ಯೆ ತುಸು ನಿವಾರಣೆ ಆಗಿದ್ದು, ‘ರಾಧೆ-ಶ್ಯಾಮ್’ ಸಿನಿಮಾ ಬಿಡುಗಡೆಗೆ ಕೆಲ ದಿನಗಳ ಮುಂಚೆಯಷ್ಟೆ ಸರ್ಕಾರವು ಹೊಸ ಆದೇಶ ಹೊರಡಿಸಿ, ದೊಡ್ಡ ಸಿನಿಮಾಗಳು ಸಿನಿಮಾ ಬಿಡುಗಡೆ ಆದ ಮೊದಲ ಹತ್ತು ದಿನಗಳು ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಹೆಚ್ಚಿಸಬಹುದು ಎಂದು ಹೇಳಿದೆ.
ಆದರೆ ಆಂಧ್ರ-ತೆಲಂಗಾಣಗಳಲ್ಲಿ ಜನಪ್ರಿಯವಾಗಿರುವ ಬೆನಿಫಿಟ್ ಶೋಗಳನ್ನು ನಡೆಸುವಂತಿಲ್ಲ ಎಂದಿದೆ. ಇದರ ಹೊರತಾಗಿಯೂ ಆಂಧ್ರದ ಕೆಲವು ನಗರಗಳಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ರಾಧೆ-ಶ್ಯಾಮ್ ಸಿನಿಮಾದ ಬೆನಿಫಿಟ್ ಶೋಗಳನ್ನು ನಡೆಸಲಾಗಿದೆ.
ಹೀಗಾಗಿಯೇ ರಾಧೆ ಶ್ಯಾಮ್ ಪ್ರಸಾರವಾಗುತ್ತಿದ್ದ ಚಿತ್ರಮಂದಿರಗಳನ್ನು ಸೀಜ್ ಮಾಡಿ ಬಂದ್ ಮಾಡಿಸಲಾಗಿದೆ. ಶ್ರೀಕಾಕುಳಂನ ರಾಜಂ ಎಂಬಲ್ಲಿ ನಿಯಮ ಉಲ್ಲಂಘಿಸಿ ‘ರಾಧೆ-ಶ್ಯಾಮ್’ ಸಿನಿಮಾದ ಬೆನಿಫಿಟ್ ಶೋ ನಡೆಸಲಾಗುತ್ತಿತ್ತು. ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಕಂದಾಯ ಅಧಿಕಾರಿಗಳು ಚಿತ್ರಮಂದಿರವನ್ನು ಸೀಜ್ ಮಾಡಿದ್ದಾರೆ. ಇದೇ ರೀತಿ ಇನ್ನೂ ಕೆಲವೆಡೆ ಪಟ್ಟಣ ಪ್ರಾಂಥ್ಯಗಳಲ್ಲಿ ಚಿತ್ರಮಂದಿರಗಳು ನಿಯಮ ಬಾಹಿರವಾಗಿ ಬೆನಿಫಿಟ್ ಶೋಗಳನ್ನು ಪ್ರದರ್ಶಿಸಿರುವುದು ವರದಿ ಆಗಿವೆ.