8 ವರ್ಷಗಳ ನಂತರ ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸತೀಶ್ – ಸಿಂಧು ಜೋಡಿ
ಬೆಂಗಳೂರು : ಕರೆಂಟು ಹೋದ ಟೈಮಲಿ ಈ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.. ಈ ಹಾಡು ‘ಲವ್ ಇನ್ ಮಂಡ್ಯ’ ಸಿನಿಮಾದ್ದು.. ಈ ಸಿನಿಮಾದ ಮೂಲಕ 2 ಬಾರಿಗೆ ತೆರೆಹಂಚಿಕೊಂಡಿದ್ದ ಜೋಡಿ ಸತೀಶ್ ನಿನಾಸಂ ಹಾಗೂ ಸಿಂಧು ಜೋಡಿ ಆನ್ ಸ್ಕ್ರೀನ್ ಕಮಾಲ್ ಮಾಡಿತ್ತು.. ಅಷ್ಟೇ ಅಲ್ಲ ಲವ್ ಇನ್ ಮಂಡ್ಯಾ ಸಿನಿಮಾದ ಮತ್ತೊಂದು ಹಾಡು ಒಪ್ಕೊಂಡ್ ಬಿಟ್ಳು ಕಣ್ಲಾ ಪ್ರೀತಿ ಮಾಡೋಕೆ ಹಾಡು ಸಹ ಸೂಪರ್ ಹಿಟ್ ಆಗಿತ್ತು..
ಮೊದಲಿಗೆ ಈ ಜೋಡಿ ಡ್ರಾಮಾ ಸಿನಿಮಾದಲ್ಲಿ ಒಂದಾಗಿದ್ದರು. ಲವ್ ಇನ್ ಮಂಡ್ಯ ಸಿನಿಮಾದ ಮೂಲಕ ಚಂದನವನದ ಬೆಸ್ಟ್ ಜೋಡಿಗಳ ಲಿಸ್ಟ್ ಸೇರಿದ್ದ ಈ ಜೋಡಿ ಸುಮಾರು 8 ವರ್ಷಗಳ ನಂತರ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ… ಆದ್ರೆ ಸಿನಿಮಾದಲ್ಲಿ ಅಲ್ಲ ಬದಲಾಗಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿರುವ ಜನಪ್ರಿಯ ಶೋ ‘ಗೋಲ್ಡನ್ ಗ್ಯಾಂಗ್’ ನಲ್ಲಿ ಸಿಂಧು ಮತ್ತು ಸತೀಶ್ ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಇಬ್ಬರೂ ಒಟ್ಟಾಗಿ ಹೆಜ್ಜೆ ಹಾಕಿದ್ದು ಗಮನ ಸೆಳೆದಿದ್ದಾರೆ.