Shreya Ghoshal : ಖ್ಯಾತ ಗಾಯಕಿ ಶ್ರೇಯಾ ಘೋಶಾಲ್ ಗೆ ಹುಟ್ಟು ಹಬ್ಬದ ಸಂಭ್ರಮ
ಭಾರತದ ಜನಪ್ರಿಯ ಗಾಯಕಿ , ಮೆಲೋಡಿ ಹಾಡುಗಳ ಮೂಲಕ ಜನರ ಫೇವರೇಟ್ ಹಿನ್ನೆಲೆ ಗಾಯಕಿಯಾಗಿರುವ ಶ್ರೇಯಾ ಘೋಶಾಲ್ ಅವರು ಇಂದು 38ನೇ ವರ್ಷಕ್ಕೆ ವಸಂತಕ್ಕೆ ಕಾಲಿಟ್ಟಿದ್ದು , ಅವರ ಅಭಿಮಾನಿಗಳು , ಆಪ್ತರು , ಸಿನಿಮಾ ತಾರೆಯರು ಸೋಷಿಯಲ್ ಮೀಡಿಯಾ ಮೂಲಕ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಶ್ರೇಯಾ ಘೋಶಾಲ್ ಅನೇಕ ಕನ್ನಡ ಹಾಡುಗಳನ್ನ ಹಾಡಿದ್ದಾರೆ.. ಅದ್ರಲ್ಲೂ ಇತ್ತೀಗೆ ಕನ್ನಡದ ರಾಬರ್ಟ್ ಸಿನಿಮಾದ ಕಣ್ಣಾ ಹೊಡೆಯಾಕಾಗೂ ಅವರೇ ಧ್ವನಿ ನೀಡಿದ್ದರು.. ಹೀಗೆ ಕನ್ನಡದ ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗಿದ್ದು ಇಲ್ಲೂ ಅನೇಕ ಅಭಿಮಾನಿಗಳನ್ನ ಹೊಂದಿದ್ದಾರೆ..
ಶ್ರೇಯಾ ಘೋಶಾಲ್ ಅವರು ಮಾರ್ಚ್ 12, 1984 ರಂದು ಪಶ್ಚಿಮ ಬಂಗಾಳದ ಬೆಹ್ರಾಂಪುರದ ಮುರ್ಷಿದಾಬಾದ್ ನಲ್ಲಿ ಜನಿಸಿದರು. ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಹೊಂದಿದ್ದದ ಅವರು, ತಮ್ಮ ನಾಲ್ಕನೇ ವಯಸ್ಸಿನಿಂದಲೇ ಸಂಗೀತ ಕಲಿಯಲು ಆರಂಭಿಸಿದ್ದರು.
ಸರೆಗಮಪ’ ಟಿವಿ ಕಾರ್ಯಕ್ರಮದಿಂದಾಗಿ ಶ್ರೇಯಾ ಘೋಶಾಲ್ ಅವರಿಗೆ ದೊಡ್ಡ ಅವಕಾಶ ಸಿಕ್ಕಿತ್ತು. ‘ಸರಿಗಮಪ’ ಸೀಸನ್ ಎರಡರಲ್ಲಿ ಶ್ರೇಯಾ ಘೋಷಾಲ್ ಭಾಗವಹಿಸಿದ್ದರು. ಅದು ಶ್ರೇಯಾ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿತು. ಸರಿಗಮಪಾದಿಂದಾಗಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಶ್ರೇಯಾ ಅವರಿಗೆ ತಮ್ಮ ಚಿತ್ರ ದೇವದಾಸ್ ನಲ್ಲಿ ಹಾಡುವ ಅವಕಾಶ ನೀಡಿದರು. ಇಲ್ಲಿಂದ ಶ್ರೇಯಾ ಘೋಶಾಲ್ ಗೆ ಅಅದೃಷ್ಟದ ಬಾಗಿಲು ತೆರೆದಿತ್ತು.
ಶ್ರೇಯಾ ಘೋಶಾಲ್ ಹಿಂದಿ ಜೊತೆಗೆ ಬಂಗಾಳಿ, ತಮಿಳು, ತೆಲುಗು, ಕನ್ನಡ, ಮರಾಠಿ ಮತ್ತು ಭೋಜ್ಪುರಿ ಭಾಷೆಗಳ ಹಾಡುಗಳನ್ನು ಹಾಡಿದ್ದಾರೆ.
ಶ್ರೇಯಾ ಘೋಶಾಲ್ ಅತ್ಯುತ್ತಮ ಹಾಡಿಗಾಗಿ ಹಲವಾರು ಪ್ರಶಸ್ತಿಗಳನ್ನು (Award) ಗೆದ್ದಿದ್ದಾರೆ. ಕೇವಲ 26 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಮೊದಲ ಗಾಯಕಿ ಎಂಬ ಹೆಗ್ಗಳಿಕೆ ಶ್ರೇಯಾ ಅವರಿಗೆ ಸಲ್ಲುತ್ತದೆ.
ಅಷ್ಟೇ ಅಲ್ಲ ಶ್ರೇಯಾ ಅವರ ಹೆಸರಿನಲ್ಲಿ, ಜೂನ್ 26 ರ ದಿನವನ್ನು ಯುಎಸ್ ನ ಓಹಿಯೋದಲ್ಲಿ ಶ್ರೇಯಾ ಘೋಶಾಲ್ ದಿನವೆಂದೇ ಆಚರಿಸಲಾಗುತ್ತದೆ. 2015 ರಲ್ಲಿ ಶ್ರೇಯಾ ತನ್ನ ಬಾಲ್ಯದ ಗೆಳೆಯ ಶಿಲಾದಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾದರು.