ಉಪೇಂದ್ರ ಹೊಸ ಸಿನಿಮಾ ಮಾಡಲು ನಯನತಾರಾ ಕಾರಣ..!!!
ಸ್ಯಾಂಡಲ್ ವುಡ್ ಬುದ್ದಿವಂತ ಉಪೇಂದ್ರ ಅವರು ನಿನ್ನೆ ತಮ್ಮ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.. ಟೈಟಲ್ ಏನೆಂದು ಸರಿಯಾಗಿ ಹೇಳದೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.. ಕುದರೆ ಸವರಾಇ ಮಾಡುತ್ತಿರುವ ಹೋರಾಟಗಾರನಂತೆ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ.. ಇಷ್ಟು ವಿಚಾರವಂತು ಕನ್ ಫರ್ಮ್..
ಉಪ್ಪಿ ಅವರೇ ನಿರ್ದೇಶನ ಮಾಡಿ ನಟಿಸುತ್ತಿರುವ ಈ ಸಿನಿಮಾವನ್ನ ಸದ್ಯಕ್ಕೆ ಎಲ್ಲರೂ ಯುಐ ಎಂದು ಕರೆಯುತ್ತಿದ್ದಾರೆ.. ವಿಶೇಷ ಅಂದ್ರೆ ಸೂಪರ್ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ತೆರೆ ಹಂಚಿಕೊಂಡಿದ್ದ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ಸಿನಿಮಾ ಮಾಡೋದಕ್ಕೆ ಕಾರಣವಂತೆ.. ಹಾಗಂತ ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಂತಲ್ಲ..
ಆದ್ರೆ ಉಪ್ಪಿ ಈ ಸಿನಿಮಾದ ಕಥೆ ಬಗ್ಗೆ ಸೀರಿಯಸ್ ಆಗಿ ಫೋಕಸ್ ಮಾಡೋದಕ್ಕೆ ನಯನತಾರಾ ಕಾರಣವೆಂದು ಸ್ವತಃ ಉಪ್ಪಿ ಅವರೇ ಹೇಳಿಕೊಂಡಿದ್ದಾರೆ.. “ಸಿನಿಮಾದ ಎಳೆ ನನ್ನನ್ನು ತುಂಬಾ ಕಾಡುತ್ತಿತ್ತು. ಉಪ್ಪಿ 2 ಸಿನಿಮಾದ ಶೂಟಿಂಗ್ ವೇಳೆ ಅದನ್ನು ನಯನತಾರಾ ಅವರ ಬಳಿ ಹೇಳಿಕೊಂಡೆ. ಇಂತಹ ಥಾಟ್ಸ್ ನಿಮ್ಮಲ್ಲಿಯೇ ಉಳಿಯಬಾರದು, ಅದನ್ನು ಜನರಿಗೂ ಹೇಳಬೇಕು ಅಂತ ಅವರು ಒತ್ತಾಯಿಸಿದರು.
ಅದಾದ ನಂತರವೇ ಈ ಎಳೆಯ ಮೇಲೆ ಸೀರಿಯಸ್ ಆಗಿ ಕೆಲಸ ಮಾಡಲಾರಂಭಿಸಿದೆ ಎಂದಿದ್ದಾರೆ ಉಪೇಂದ್ರ. ಮೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗುತ್ತಿದೆ.. ಮೂಲಗಳ ಪ್ರಕಾರ ಈ ಸಿನಿಮಾಗೆ ನಯನತಾರಾ ಅವರೇ ನಾಯಕಿಯಾದ್ರೂ ಅಚ್ಚರಿ ಪಡಬೇಕಾಗಿಲ್ಲ.. ಲಹರಿ ಫಿಲ್ಮ್ಸ್ ಲಾಂಛನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.