ಅಪ್ಪುಗಾಗಿ ಒಂದಾಗುತ್ತಿದೆ ‘ಗೊಂಬೆ ಹೇಳುತೈತೆ’ ಜೋಡಿ – ಪುನೀತ್ ಬರ್ತ್ ಡೇ ಗೆ ಹೊಸ ಹಾಡು ರಿಲೀಸ್…!!!
ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ Puneeth Rajkumar ಅವರ James ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..
ಮಾರ್ಚ್ 17 ರಂದು ಅಪ್ಪು ಬರ್ತ್ ಡೇ ಆಚರಣೆ ಮಾಡಲು ಅಪ್ಪು ಅಭಿಮಾನಿಗಳು ಈಗಿನಿಂದಲೇ ತಯಾರಿ ಮಾಡಿಕೊಳ್ತಿದ್ಧಾರೆ.. ಮತ್ತೊಂದೆಡೆ ಅಪ್ಪು ಹುಟ್ಟುಹಬ್ಬ ಆಚರಣೆಗೆ ಸ್ಯಾಂಡಲ್ ವುಡ್ ಕೂಡ ಸಜ್ಜಾಗ್ತಿದೆ.. ಕೆಲವು ಕಡೆ ಪುನೀತ್ ಹೆಸರಿನಲ್ಲಿ ರಕ್ತದಾನ, ಅಂಗಾಂಗ ದಾನ , ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ವಾಗಿ ಹುಟ್ಟುಹಬ್ಬ ಆಚರಣೆಗೆ ಅಪ್ಪು ಅಭಿಮಾನಿಗಳು ಸಜ್ಜಾಗಿದ್ದಾರೆ..
ಇದೀಗ ಅಪ್ಪುಗೆ ಯುವರತ್ನ , ರಾಜಕುಮಾರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಪುನೀತ್ ಅವರಿಗೆ ಹಾಡೊಂದನ್ನು ಬರೆದಿದ್ದಾರೆ.. ಪುನೀತ್ ವ್ಯಕ್ತಿತ್ವವನ್ನು ಸಾರುವಂತಹ ಹಾಡು ಇದಾಗಿದೆ.. ಈ ಹಾಡಿಗೆ ವಿಜಯ್ ಅವರು ಧ್ವನಿಯಾಗಿದ್ದಾರೆ.. ತಮನ್ ಅವರ ಸಂಗೀತ ಸಂಯೋಜನೆಯ ಈ ಹಾಡನ್ನ ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ‘ಗೊಂಬೆ ಹೇಳುತೈತೆ’ ಕಾಂಬಿನೇಷನ್ ಮತ್ತೆ ಅಪ್ಪುಗಾಗಿ ಒಂದಾಗುತ್ತಿದೆ..