RRR ಸಿನಿಮಾಗೆ ನನ್ನ ಯಾಕೆ ಆಯ್ಕೆ ಮಾಡಿಕೊಂಡಿಲ್ಲ ಎಂದ ಪ್ರಭಾಸ್ ಪ್ರಶ್ನೆಗೆ ಜಕ್ಕಣ್ಣನ ಉತ್ತರವಿದು..!!!
ಹೈದ್ರಾಬಾದ್ : ಛತ್ರಪತಿ , ಬಾಹುಬಲಿ , ಬಾಹುಬಲಿ 2 ಸಿನಿಮಾ ಮೂಲಕ ಸೂಪರ್ ಕಾಂಬೋ ಎನಿಸಿಕೊಂಡಿದ್ದ ಪ್ರಭಾಸ್ ಮತ್ತೆ ರಾಜಮೌಳಿ ಮತ್ತೆ ಒಂದಾಗೋದು ಯಾವಾಗ ೆಂಬ ಪ್ರಶ್ನೆ ಅಭಿಮಾನಿಗಳನ್ನ ತೀವ್ರವಾಗಿ ಕಾಡುತ್ತಿದೆ.. ಅದ್ರಲ್ಲೂ ಬಾಲಿವುಡ್ ಮತ್ತೆ ವಿಶ್ವಕ್ಕೆ ಸೌತ್ ನ ಪವರ್ ತೋರಿಸಿಕೊಟ್ಟ ಸಿನಿಮಾ ಬಾಹುಬಲಿ.. ಈ ಸಿನಿಮಾ ಮೂಲಕವೇ ಪ್ರಭಾಸ್ ಆಲ್ ಓವರ್ ಇಂಡಿಯಾ ಗುರುತಿಸಿಕೊಂಡರು.. ಭಾರತದ ಬಿಗ್ ಸ್ಟಾರ್ ಆಗಿ ಹೊರಹೊಮ್ಮಿದರು.. ಜಕ್ಕಣ್ಣನ ಸಿನಿಮಾದ ಪವರ್ ವಿಶ್ವಕ್ಕೆ ಗೊತ್ತಾಯ್ತು.. ಸದ್ಯ ಬಾಹುಬಲಿ ನಂತರ ರಾಜಮೌಳಿ RRR ಸಿನಿಮಾದಲ್ಲಿ ಬ್ರಯುಸಿಯಿದ್ದು ಈ ಸಿನಿಮಾ ಮಾರ್ಚ್ 25 ಕ್ಕೆ ರಿಲೀಸ್ ಆಗಲಿದೆ.. ಈ ಸಿನಿಮಾದ ಟ್ರೇಲರ್ ನೋಡಿದ್ರೆನೇ ಹೇಳಬಹುದು ಇದು ಬಾಹುಬಲಿ ರೇಂಜ್ ಗೆ ಸೌಂಡ್ ಮಾಡಲಿದೆ ಅಂತ..
ಬಾಹುಬಲಿ ನಂತರ ಪ್ರಭಾಸ್ ಸಾಹೋ ರಿಲೀಸ್ ಆಗಿ ಬಾಕ್ಸ್ ಆಪೀಸ್ ನಲ್ಲಿ ಕಮಾಲ್ ಮಾಡಿದ್ರೂ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗಲಿಲ್ಲ.. ಮಾರ್ಚ್ 11 ಕ್ಕೆ ಅವರ ಅಭಿನಯದ ಬಹುನಿರೀಕ್ಷೆಯ ಸಿನಿಮಾ ರಾಧೆ ಶ್ಯಾಮ್ ರಿಲೀಸ್ ಆಗಿದೆ.. ಆದ್ರೆ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಈ ನಡುವೆ ಬಾಹುಬಲಿ 3 ಬರಬೇಕು ಎಂದು ಅಭಿಮಾನಿಗಳು ಅಭಿಪ್ರಾಯ ಹೊರಹಾಕುತ್ತಿದ್ದು , ಈ ಬಗ್ಗೆಯೂ ಪ್ರಭಾಸ್ ಪ್ರತಿಕ್ರಿಯೆ ನೀಡಿದ್ದರು.. ಬಾಹುಬಲಿ 3 ಸಿನಿಮಾ ಬರಬೇಕು ಅಂದ್ರೆ ರಾಜಮೌಳಿ ಅವರು ನಿರ್ಧಾರ ಮಾಡಬೇಕು ಎಂದಿದ್ದರು.. ಈ ನಡುವೆ ಮತ್ತೊಂದು ಪ್ರಶ್ನೆ ಕಾಡುತ್ತಿದೆ.. ಅದೇ RRR ಚಿತ್ರಕ್ಕೆ ರಾಜಮೌಳಿ ಯಾಕೆ ಪ್ರಭಾಸ್ ಅನ್ನು ಆಯ್ಕೆ ಮಾಡಿಲ್ಲ ಎಂಬುದು.. ಈ ಪ್ರಶ್ನೆಗೆ ರಾಜಮೌಳಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾ ಪ್ರಚಾರಕ್ಕೆ ರಾಜಮೌಳಿ ತೆರಳಿದ್ದರು. ಒಂದೇ ವೇದಿಕೆಯಲ್ಲೇ ಇಬ್ಬರೂ ತಮ್ಮ ಸಿನಿಮಾಗಳನ್ನು ಪ್ರಚಾರ ಮಾಡುತ್ತಿದ್ದರು. ರಾಜಮೌಳಿ ಹಾಗೂ ಪ್ರಭಾಸ್ ಒಬ್ಬರನ್ನಿಬ್ಬರು ಸಂದರ್ಶನ ಮಾಡುತ್ತಿದ್ದರು. ಈ ವೇಳೆ ಪ್ರಭಾಸ್ ರಾಜಮೌಳಿ ಅವರಿಗೆ RRR ಚಿತ್ರಕ್ಕೆ ನನ್ನ ಆಯ್ಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಾಜಮೌಳಿ ಅವರು ನೀನೊಂದು ದೊಡ್ಡ ಹಡಗು ಇದ್ದಂತೆ. ಹಡಗಿನ ಅವಶ್ಯಕತೆ ಇಲ್ಲದೆ ಇದ್ದಿದ್ದರಿಂದ ಅದು ನಮ್ಮೊಂದಿಗೆ ಇರಲಿಲ್ಲ.
ಆದರೆ, ನಮಗೆ ಆ ಹಡಗು ತುಂಬಾನೇ ಮುಖ್ಯ ಅಂತ ಅನಿಸಿದ್ದರೆ, ನಾವು ಅದೆಂತಹದ್ದೇ ಕ್ಷಣದಲ್ಲಿಯೂ ನಿನ್ನನ್ನು ಈ ಸಿನಿಮಾಗೆ ಕರೆದುಕೊಂಡು ಬರುತ್ತಿದ್ದೆವು ಎಂದು ಉತ್ತರಿಸಿದ್ದಾರೆ. ಆದ್ರೆ ರಾಜಮೌಳಿ ಅವರ ಉತ್ತರ ಕೇಳಿ ಅವರ ಕಾಲೆಳೆದ ಪ್ರಭಾಸ್ , RRR ಚಿತ್ರಕ್ಕೆ ತನ್ನನ್ನು ಆಯ್ಕೆ ಮಾಡಿಕೊಳ್ಳದೆ ಇದ್ದಿದ್ದಕ್ಕೆ ಕಾರಣ ಬೇರೆನೇ ಇದೆ. ರಾಮ್ ಚರಣ್ ಹಾಗೂ ತಾರಕ್ ಇಬ್ಬರೂ ನನಗೆ ನಿಮಗೆ ಕ್ಲೋಸ್ ಇದ್ದಾರೆ. ಅದಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದೀರ ಎಂದಿದ್ಧಾರೆ.