The Kashmir Files : ಕರಾಳ ಸತ್ಯ ತೆರೆದಿಟ್ಟ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ‘Y’ ಗ್ರೇಡ್ ಭದ್ರತೆ
ಮಾರ್ಚ್ 11 ರಂದು ಸಾಕಷ್ಟು ವಿವಾದಗಳ ನಂತರ ಇಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿರೋದು ಒಂದೆಡೆಯಾದ್ರೆ , ಇಡೀ ಭಾರತೀಯರನ್ನ ಒಗ್ಗೂಡಿಸುತ್ತಿದೆ.. ಥಿಯೇಟರ್ ಗಳ ಮುಂದೆ ಜನ ಮುಗಿಬಿದ್ದು ಜಮಾಯಯಿಸುತ್ತಿದ್ದಾರೆ.. ಎಷ್ಟೋ ಕಡೆಗಳಲ್ಲಿ ಸಿನಿಮಾ ಟೆಕೆಟ್ ಗಳು ಸಿಗದೇ ನಿರಾಶಿತರಾಗುತ್ತಿದ್ದಾರೆ..
ಅಂದ್ಹಾಗೆ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾದ ಕಲೆಕ್ಷನ್ ಈವರೆಗೂ 106 ಕೋಟಿ ರೂಪಾಯಿ ದಾಟಿದೆ..
ಈ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ‘ವೈ’ ಗ್ರೇಡ್ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಅಗ್ನಿಹೋತ್ರಿ ರಕ್ಷಣೆಗೆ ನಾಲ್ಕೈದು ಮಂದಿ ಸಶಸ್ತ್ರ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಸಿ ಆರ್ ಪಿ ಎಫ್ ಪಡೆ ಭಾರತದಾದ್ಯಂತ ತಾವಿರುವ ಸ್ಥಳದಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ನಿರ್ದೇಶಕರಿಗೆ ರಕ್ಷಣೆ ನೀಡಲಿದೆ.
ಕೇಂದ್ರ ಗೃಹ ಸಚಿವಾಲಯವು, ಇಂಟೆಲಿಜೆನ್ಸ್ ಬ್ಯೂರೋ (IB) ಶಿಫಾರಸಿನ ಮೇರೆಗೆ ನಿರ್ದೇಶಕರಿ Y ಗ್ರೇಡ್ ಭದ್ರತೆಯನ್ನ ಒದಗಿಸುತ್ತಿದೆ.
ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಭಾಕ್ಸ್ ಆಫೀಸ್ ನಲ್ಲಿ 100 ಕೋಟಿಯ ಗಡಿ ದಾಟಿ ಮುನ್ನುಗ್ಗುತ್ತಿದೆ.
ಭಾರತದಲ್ಲಿ ಭದ್ರತಾ ವ್ಯವಸ್ಥೆಯನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಲಾಗಿದೆ. ಇದು SPG ರಕ್ಷಣೆ, Z ಪ್ಲಸ್, Z, Y ಮತ್ತು X ವರ್ಗವನ್ನು ಒಳಗೊಂಡಿದೆ. Y ವರ್ಗವು ಭದ್ರತೆಯ ಮೂರನೇ ಹಂತವಾಗಿದೆ. ಕಡಿಮೆ ಅಪಾಯವಿರುವ ಜನರಿಗೆ ಈ ರಕ್ಷಣೆಯನ್ನು ನೀಡಲಾಗುತ್ತದೆ. ಒಟ್ಟು 11 ಭದ್ರತಾ ಸಿಬ್ಬಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಇಬ್ಬರು ಪಿಎಸ್ಒಗಳು (ಖಾಸಗಿ ಭದ್ರತಾ ಸಿಬ್ಬಂದಿ) ಮತ್ತು ಒಬ್ಬರು ಅಥವಾ ಇಬ್ಬರು ಕಮಾಂಡೋಗಳನ್ನು ನಿಯೋಜಿಸಲಾಗಿದೆ. ದೇಶದ ಬಹುತೇಕ ಜನರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ.
ಸಿನಿಮಾದಲ್ಲಿ ದಶಕಗಳ ಹಿಂದೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತೋರಿಸಲಾಗಿದೆ. ಕೆಲವರು ಈ ಸಿನಿಮಾವನ್ನ ‘ಪ್ರೊಪಾಗಾಂಡಾ’ ಸಿನಿಮಾ ಎಂದು ಕರೆದಿದ್ದಾರೆ. ಸಿನಿಮಾ ಬಗ್ಗೆ ಅನೇಕಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಇದೇ ಸಿನಿಮಾದ ಚರ್ಚೆ ಜೋರಾಗಿದೆ.
ವಿವೇಕ್ ಅಗ್ನಿಹೋತ್ರಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು 1980 ಮತ್ತು 90 ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಆಧರಿಸಿದೆ.
ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ತೆಲುಗು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಹ-ನಿರ್ಮಾಣ ಮಾಡಿದ್ದಾರೆ.
ಮಾರ್ಚ್ 11 ರಂದು ದೇಶಾದ್ಯಂತ ಬಿಡುಗಡೆಯಾದ ಈ ಮೂವಿ ಭರ್ಜರಿ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲ ಕಲೆಕ್ಷನ್ ಗಳ ಮಳೆಯೂ ಸುರಿಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಚಿತ್ರ ನೋಡಿ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮಾತ್ರವಲ್ಲ ಚಿತ್ರರಂಗದ ದಿಗ್ಗಜರು, ಹಲವು ಗಣ್ಯರು ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.