Mahanayaka : ‘ಮಹಾನಾಯಕ’ ಧಾರವಾಹಿಗೆ ಬೆದರಿಕೆ ಕರೆ ಬಂದಾಗ , ಧೈರ್ಯ ತುಂಬಿ ರಿಲೀಸ್ ಮಾಡಿ ಎಂದಿದ್ದರಂತೆ ಯಶ್…!!
ಅಸ್ಪೃಶ್ಯತೆ ವಿರುದ್ಧ ಹೋರಾಡಿ , ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ ಮಹಾಗಾಥೆಯನ್ನ ಜನರಿಗೆ ದರ್ಶಿಸುವ ಸಲುವಾಗಿಯೇ ಖಾಸಗಿ ವಾಹಿನಿಯಲ್ಲಿ ‘ಮಹಾನಾಯ’ ಧಾರವಾಹಿಯನ್ನ ಪ್ರಸಾರ ಮಾಡಲಾಗ್ತಿದ್ದು ಈವರೆಗೂ ಈ ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು , ಜನಮೆಚ್ಚುಗೆ ಗಳಿಸಿದೆ..
ಆದ್ರೆ ಕೆಲವರು ಆರಂಭದಲ್ಲಿ ಈ ಧಾರವಾಹಿ ವಿರುದ್ಧ ಬೆದರಿಕೆಗಳನ್ನ ಹಾಕಿದ್ದರು.. ಹೌದು ಅಂಬೇಡ್ಕರ್ ಅವರ ಜೀವನದ ಕಥೆ ಧಾರಾವಾಹಿ ರೂಪದಲ್ಲಿ ಶನಿವಾರ ಹಾಗೂ ಭಾನುವಾರ ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿತ್ತು. ಈ ಸೀರಿಯಲ್ಗೆ ‘ಮಹಾ ನಾಯಕ’ ಎಂದು ಹೆಸರಿಡಲಾಗಿದೆ. ಜನಪ್ರಿಯ ಧಾರಾವಾಹಿ ವೀಕ್ಷಕರು ಪ್ರತಿನಿತ್ಯ ವೀಕ್ಷಿಸಲು ಒತ್ತಾಯಿಸಿದ್ದರಿಂದ ದೈನಂದಿನ ಧಾರಾವಾಹಿಯಾಗಿ ಪರಿವರ್ತಿಸಲಾಗಲಿದೆ. ಇದು ಈಗ ವಾರಾಂತ್ಯದ ಬದಲಿಗೆ ಪ್ರತಿನಿತ್ಯ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
ಅಂದ್ಹಾಗೆ 2020ರ ಜುಲೈನಲ್ಲಿ ಕನ್ನಡ ಕಿರುತೆರೆಯಲ್ಲಿ ‘ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಾರಂಭವಾಗಿತ್ತು. ಈ ಧಾರಾವಾಹಿಯನ್ನು ಜನರು ಒಟ್ಟಾಗಿ ಕೂತು ವೀಕ್ಷಿಸಲಾರಂಭಿಸಿದರು.. ಪುಟ್ಟ ಭೀಮರಾವ್ ಅಭಿನಯಕ್ಕೆ ವೀಕ್ಷಕರು ಮಾರು ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ಧಾರಾವಾಹಿಯ ಬ್ಯಾನರ್ ಹಾಗೂ ಕಟೌಟ್ ನಿರ್ಮಿಸಿ ಉತ್ತೇಜಿಸಲಾಯ್ತು. ಆದ್ರೆ ಕೆಲವೆಡೆ ಕೆಲ ಕಿಡಿಗೇಡಿಗಳು ಬ್ಯಾನರ್ ಧ್ವಂಸ ಮಾಡಿದ್ದೂ ಉಂಟು…
ಅಷ್ಟೇ ಅಲ್ಲದೇ ಮಹಾನಾಯಕ ಧಾರಾವಾಹಿ ಪ್ರಸಾರವಾದ ಆರಂಭದಲ್ಲೇ, ನಿಲ್ಲಿಸುವಂತೆ ಬೆದರಿಕೆ ಕರೆಯೂ ಬಂದಿತ್ತಂತೆ.. ಆದ್ರೆ ಆಗಲೇ ಧಾರವಾಹಿಯನ್ನ ಪ್ರಸಾರ ಮಾಡುವಂತೆ ಧೈರ್ಯ ತುಂಬಿದವರು ರಾಕಿಂಗ್ ಸ್ಟಾರ್ ಯಶ್.. ಹೌದು.. ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿ ಪ್ರಸಾರ ಆರಂಭ ಆದಾಗ, ಪ್ರಸಾರ ಮಾಡದಂತೆ ಜೀ ವಾಹಿನಿಗೆ ಧಮ್ಕಿ ಹಾಕಲಾಗಿತ್ತು. ಆಗ ಯಶ್ ಅವರೇ ರಾಘವೇಂದ್ರ ಹುಣಸೂರು ಅವರಿಗೆ ಕರೆ ಮಾಡಿ ನಾನು ಇದ್ದೇನೆ ಪ್ರಸಾರ ಮಾಡಿ ಎಂದು ಧೈರ್ಯ ತುಂಬಿದ್ದರಂತೆ. ಈ ಮಾತನ್ನು ಕಾರ್ಯಕ್ರಮ ಒಂದರಲ್ಲಿ ತಿಳಿಸಿದ್ದರು.
ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು ಮಹಾನಾಯಕರು ಡಾಕ್ಟರ್ ಬಿ. ಆರ್ ಅಂಬೇಡ್ಕರ್. ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ಅವರು ಏಪ್ರಿಲ್ 14, 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ನಲ್ಲಿ ಜನಿಸಿದರು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದ ಮೂಲದವರಾದ ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೆ ಅವರ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಮಹಾನಾಯಕನಾಗಿ ಬೆಳೆದವರು.
The Kashmir Files : 9 ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ
‘The Kashmir Files’ ಮುಂಬರುವ ಚುನಾವಣೆಯಲ್ಲಿ ಯಾರಿಗೂ ಲಾಭವನ್ನು ನೀಡುವುದಿಲ್ಲ : ಸಂಜಯ್ ರಾವತ್
Puneeth Rajkumar : ಶಾಲಾ ಪಠ್ಯದಲ್ಲಿ ಪುನೀತ್ ರಾಜ್ ಕುಮಾರ್ ಪಾಠ..!!