#RRR | ಸಿನಿಮಾ ಮೇಕರ್ ಆಗಿ ನಾನು ಫೈಲ್ಯೂರ್ ಎಂದಿದ್ದೇಕೆ ರಾಜಮೌಳಿ
ಸದ್ಯ ದೇಶಾದ್ಯಂತ RRR ಸಿನಿಮಾ ಮೇನಿಯಾ ಕಂಡು ಬರುತ್ತಿದೆ.
ಮಾರ್ಚ್ 25 ರಂದು ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಲಿದೆ.
ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ ಚಿತ್ರತಂಡ ಪ್ರತಿ ದಿನ ಪ್ರಚಾರದಲ್ಲಿ ತೊಡಗಿಕೊಂಡಿದೆ.
ಕಾಲಿಗೆ ಚಕ್ರಕಟ್ಟಿಕೊಂಡವರಂತೆ ನಿರ್ದೇಶಕ ರಾಜಮೌಳಿ, ನಟರಾದ ಜ್ಯೂನಿಯರ್ ಎನ್ ಟಿ ಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಊರೂರು ಸುತ್ತಾಡುತ್ತಿದ್ದಾರೆ.
ಸಿನಿಮಾ ಮೇಕಿಂಗ್ ವಿಚಾರವಾಗಿ ಮಾತನಾಡುತ್ತಾ ರಾಜಮೌಳಿ, ‘ನನ್ನ ಗಮನ ಯಾವಾಗಲೂ ಪಾತ್ರಗಳ ಮೇಲಿರುತ್ತದೆ.
ಅವರ ಜನಪ್ರಿಯತೆಯ ಮೇಲೆ ಅಲ್ಲ. ಆರ್ಆರ್ಆರ್ನಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್ ಅವರ ಜನಪ್ರಿಯತೆ ನಾನು ನೋಡಲ್ಲ.
ಅವರನ್ನು ತೆರೆಮೇಲೆ ಸಮಾನವಾಗಿ ತೋರಿಸುವುದು ಹೇಗೆ ಎಂದು ಮಾತ್ರ ಯೋಚಿಸುತ್ತೇನೆ. ಹಾಗಾಗಿಯೇ ನಾನು ಫಿಲಂ ಮೇಕರ್ ಆಗಿ ಸೋತಿದ್ದೇನೆ.
ನನಗೆ ನನ್ನ ಸೀತಾರಾಮರಾಜು, ನನ್ನ ಕೋಮುರಂ ಭೀಮ್ ಮತ್ತು ಸೀತೆಯ ಪಾತ್ರಗಳನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕೆಂದು ಯೋಚಿಸುತ್ತೇನೆ.
ಹೀಗಿದ್ದಾಗ ಮಾತ್ರ ಒಳ್ಳೆ ಸಿನಿಮಾಗಳು ಬರಲು ಸಾಧ್ಯ. ಸ್ಟಾರ್ಸ್ ಗೆ ಇರುವ ಜನಪ್ರಿಯತೆಯಂತೆ ಸಿನಿಮಾದ ಪಾತ್ರಗಳು ಇರೋದಿಲ್ಲ ಎಂದು ವಿವರಿಸಿದ್ದಾರೆ.
ಆದ್ರೆ ಪ್ರೇಕ್ಷಕರು ಮಾತ್ರ ಹೀರೋಗಳಿಗಿರುವ ಕ್ರೇಜ್ ಮೇಲೆ ಥಿಯೇಟರ್ ಗಳಿಗೆ ಬರ್ತಾರೆ. ಆದ್ರೆ ಪಾತ್ರಗಳು ಪ್ರೇಕ್ಷಕರು ಮೆಚ್ಚುವಂತೆ ಇರಬೇಕು ಎಂದಿದ್ದಾರೆ ರಾಜಮೌಳಿ. rrr-movie-ss-rajamouli-film-making