Sonam Kapoor | ತಾಯಿಯಾಗಲಿರುವ ಸೋನಂ ಕಪೂರ್
ಬಾಲಿವುಡ್ ನ ಪ್ರಮುಖ ಸ್ಟಾರ್ ಹೀರೋಯಿನ್ ಸೋನಂ ಕಪೂರ್ ಸದ್ಯದಲ್ಲೇ ತಾಯಿಯಾಗಲಿದ್ದಾರೆ.
ಇದನ್ನು ಸ್ವತಃ ಸೋನಂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ತನ್ನ ಪತಿಯೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ.. ತಾಯಿ ಆಗುತ್ತಿರುವ ಸುದ್ದಿಯನ್ನ ತಿಳಿಸಿದ್ದಾರೆ.
ಸೋನಂ ಕಪೂರ್ ಅವರ ಈ ಪೋಸ್ಟ್ ಗೆ ಕರೀನಾ ಕಪೂರ್, ಜಾನ್ವಿ ಕಪೂರ್ ಮತ್ತು ಏಕ್ತಾ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮತ್ತು ನೆಟಿಜನ್ಗಳು ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ.
2018 ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾದ ಸೋನಂ, ಕೆಲ ಸಮಯಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ.
ಇನ್ನು ಸೋನಂ ಇನ್ ಸ್ಟಾದಲ್ಲಿ ‘ನಾಲ್ಕು ಕೈಗಳು, ಎರಡು ಹೃದಯ, ಒಂದು ಕುಟುಂಬ.
ನಾವು ನಿನ್ನನ್ನು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು ಇಷ್ಟಪಡುತ್ತೇವೆ.
ನಿನ್ನ ಪ್ರತಿ ಹೆಜ್ಜೆಯಲ್ಲೂ ನಾವಿರುತ್ತೇವೆ. ಪ್ರೀತಿ ಮತ್ತು ಬೆಂಬಲ ಸದಾ ನಿನ್ನೊಂದಿಗಿರುತ್ತದೆ.
ನಿನ್ನ ಆಗಮನಕ್ಕೆ ಕಾಯುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. sonam-kapoor-and-anand-ahuja-expecting-first-child