Dhanush ರನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿಂದ ಅನ್ ಫಾಲೋ ಮಾಡಿದ Aishwarya Rajanikanth
ಕಾಲಿವುಡ್ ನ ಸ್ಟಾರ್ ಕಪಲ್ ನಟ ಧನುಷ್ ಹಾಗೂ ಪತ್ನಿ ಐಶ್ವರ್ಯ ರಜನಿಕಾಂತ್ ಡಿವೋರ್ಸ್ ಪಡೆದು ಕೆಲ ತಿಂಗಳೇ ಕಳೆದುಹೋಗಿದ್ದು , ಐಶ್ವರ್ಯಾ ಅವರು ನಿರ್ದೇಶನಕ್ಕೆ ಮರಳಿದ್ರೆ , ಧನುಷ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ..
ಈ ನಡುವೆ ಧನುಷ್ ಅವರು ಸೋಷಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ಅವರಿಗೆ ಕಮೆಂಟ್ ಮಾಡಿ “ ಆತ್ಮೀಯ ಸ್ನೇಹಿತೆ” ಎಂದು ಶುಭಕೋರಿದ್ದರು.. ಅದಕ್ಕೆ ಪ್ರತಿಯಾಗಿ ಥ್ಯಾಂಕ್ಸ್ ಧನುಷ್ ಎಂದು ಐಶ್ವರ್ಯ ಪ್ರತಿಕ್ರಿಯೆ ನೀಡಿದ್ರು,..
ಇದೀಗ ಐಶ್ವರ್ಯಾ ರಜನಿಕಾಂತ್ ಅವರು, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ನಿಂದ ಧನುಷ್ ರನ್ನ ಅನ್ ಫಾಲೋ ಮಾಡಿದ್ದಾರೆ..
ಇದು ಧನುಷ್ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ.. ನಟ ಧನುಷ್ ಹಾಗೂ ಐಶ್ವರ್ಯ ಅವರು ಜನವರಿ 17ರಂದು ಡಿವೋರ್ಸ್ ಪಡೆದಿದ್ದಾರೆ.. ಈ ಮೂಲಕ ತಮ್ಮ 18 ವರ್ಷದ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದರು..