Gully Boy Dharmesh is no more
ಫೇಮಸ್ ರಾಪರ್ ಧರ್ಮೇಶ್ ಹೃದಯಾಘಾತದಿಂದ ನಿಧನ..
24 ವರ್ಷದ ಫೇಮಸ್ ರಾಪರ್ ಧರ್ಮೇಶ್ 24 ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.. ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.
ಇವರು ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ‘ಗಲ್ಲಿ ಬಾಯ್’ ಮೂಲಕ ಖ್ಯಾತಿ ಗಳಿಸಿದ್ದವರು.. ರಾಪರ್ ಎಂಸಿ ಟಾಡ್ ಫೋಡ್ ಎಂದೇ ಜನಪ್ರಿಯತೆ ಗಳಿಸಿದ್ದ ಧರ್ಮೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರಿಗೆ ಈಗಾಗಲೇ 2 ಬಾರಿ ಹೃದಯಾಘಾತವಾಗಿತ್ತು ಎಂದು ಅವರ ತಾಯಿ ತಿಳಿಸಿದ್ದಾರೆ. 4 ತಿಂಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಲಡಾಖ್ನಲ್ಲಿದ್ದಾಗ ಇವರಿಗೆ ಮೊದಲ ಹೃದಯಾಘಾತವಾಗಿತ್ತು. ಹೀಗಾಗಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ತಾಯಿ ತಿಳಿಸಿ ಕಣ್ಣೀರಿಟ್ಟಿದ್ದಾರೆ.