ಅಪ್ಪು ಬಗ್ಗೆ ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ..!!
ಅಪ್ಪು ಅಗಲಿರುವ ನೋವಿನಿಂದ ಇನ್ನೂವರೆಗೂ ಕರುನಾಡಿನ ಜನರು ಹೊರಬಂದಿಲ್ಲ.. ನಾನಾ ರೀತಿಯಲ್ಲಿ ಅಪ್ಪು ಮೇಲಿನ ಅಭಿಮಾನವನ್ನ ತೋರಿಸಿಕೊಳ್ಳಲಾಗ್ತಿದೆ.. ಆದ್ರೀಗ ಶಾಲಾ ಪ್ರಶ್ನೆ ಪತ್ರಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕನ್ನಡದಲ್ಲಿ ಸುಮಾರು 80 ಅಂಕಗಳಿಗೆ ಪ್ರಶ್ನೆ ಕೇಳಲಾಗಿದ್ದು , ಇದು ಸದ್ಯ ವೈರಲ್ ಆಗ್ತಿದೆ.. ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ..
ಹೌದು.. ಬೆಂಗಳೂರಿನ ದಿ ನ್ಯೂ ಕ್ಯಾಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್ ಎಂಬ ಖಾಸಗಿ ಶಾಲೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತ ಪ್ರಶ್ನೆ ಕೇಳಲಾಗಿದೆ. 4ನೇ ತರಗತಿಯ ಕನ್ನಡ ಪರೀಕ್ಷೆಯಲ್ಲಿ ಪುನೀತ್ ಕುರಿತಂತೆ 80 ಅಂಕಗಳ ಪ್ರಶ್ನೆ ಕೇಳಲಾಗಿದೆ.
ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್ ರಾಜ್ಕುಮಾರ್ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಿದ್ದರು? ಪುನೀತ್ ರಾಜ್ಕುಮಾರ್ ಯಾವಾಗ ಜನಿಸಿದರು? ಪುನೀತ್ ರಾಜ್ಕುಮಾರ್ ಅವರ ತಂದೆಯ ಹೆಸರೇನು? ಪುನೀತ್ ರಾಜ್ಕುಮಾರ್ ಅವರ ತಾಯಿಯ ಹೆಸರೇನು? ಎನ್ನುವ ಜೊತೆಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ.
ಪರೀಕ್ಷೆಯಲ್ಲಿ ಪುನೀತ್ ರಾಜ್ಕುಮಾರ್ ಕುರಿತಾದ ಪ್ರಶ್ನೆ ಪತ್ರಿಕೆ ವಿತರಣೆಯಾಗುತ್ತಿದ್ದಂತೆ ಅದರ ಫೋಟೋ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ಫೋಟೊ ವೈರಲ್ ಆಗಿದೆ..