ನನ್ನೊಂದಿಗೆ ಮಲಗುವಿರಾ ಎಂದು ನೇರವಾಗಿ ಕೇಳುತ್ತೇನೆ – ಮಲಯಾಳಂ ನಟ
ಮಲಯಾಳಂ ನಟ ವಿನಾಯಕನ್ ಲೈಂಗಿಕ ವಿಚಾರವಾಗಿ ಸ್ಟೇಜ್ ಮೇಲೆ ಅಸಭ್ಯವಾಗಿ ಮಾತನಾಡಿದ್ದು , ಟೀಕೆಗೆ ಗುರಿಯಾಗಿದ್ದಾರೆ..
ತಮಿಳಿನ ಸಿನಿಮಾಗಳಲ್ಲಿ ಈ ನಟ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಮಲೆಯಾಳಂ ನಟಿ ನವ್ಯಾ ನಾಯರ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.. ಅವರು ಬಣ್ಣ ಹಚ್ಚಿರುವ ಸಿನಿಮಾ ಒರುತಿ..
ಇದೇ ಸಿನಿಮಾದ ಪ್ರಚಾರದ ವೇಳೆ ಮಾತನಾಡುತ್ತಿದ್ದ ವಿನಾಯಕನ್, ನಾನು ಹತ್ತು ಜನ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುವಿರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಅವರು ಓಕೆ ಅಂದರೆ ಓಕೆ. ಇಲ್ಲವಾದರೆ ನಾನು ಅದನ್ನು ಅಲ್ಲೇ ಬಿಟ್ಟು ಬಿಡುತ್ತೇನೆ. ಆ ವಿಚಾರವಾಗಿ ನಾನು ಅವರಿಗೆ ಬಲವಂತವನ್ನು ಮಾಡುವುದಿಲ್ಲ ಎಂದಿದ್ದಾರೆ.
ಮಹಿಳೆಗೆ ಲೈಂಗಿಕತೆಯ ಬಗ್ಗೆ ಕೇಳುವುದು ಮೀ ಟೂ ಎನ್ನುವುದಾದರೆ , ನಾನು ಅದನ್ನು ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದು , ಅವರ ಈ ಮಾತುಗಳಿಗೆ ಸಿನಿಮಾರಂಗದ ಬಹುತೇಕರು ಆಕ್ರೋಶ ಹೊರಹಾಕಿದ್ದಾರೆ.